Asianet Suvarna News Asianet Suvarna News

ಕೆಂಪು ಕೋಟೆಯಲ್ಲಿ ಭೂಗತ ಕೋಣೆ ಪತ್ತೆ

ಕೆಂಪು ಕೋಟೆಯಲ್ಲಿ ಪೀಠದ ಸಮೀಪ ಸ್ವಚ್ಛ ಮಾಡುತ್ತಿದ್ದ ವೇಳೆ ಸಿಬ್ಬಂದಿ ಈ ಗೌಪ್ಯ ಕೋಣೆಯನ್ನು ಪತ್ತೆಹಚ್ಚಿದ್ದಾರೆ. ಬಹುಷಃ ಇದು ಮೊಗಲರ ದೊರೆ ಔರಂಗಜೇಬ್ ಕಾಲ(1658 - 1707) ದಲ್ಲಿ ನಿರ್ಮಿಸಿರಬಹುದು ಅಥವಾ1857 ರಲ್ಲಿ ಮೊಗಲರಿಂದ ಕೋಟೆ ವಶಕ್ಕೆ ಪಡೆದ ಬಳಿಕ ಬ್ರಿಟಿಷರು  ನಿರ್ಮಿಸಿರಬಹುದು. ಆರು ಮೀಟರ್ ಉದ್ದ, ಎರಡು ಮೀಟರ್ ಅಗಲ ಮತ್ತು ಮೂರು ಮೀಟರ್ ಎತ್ತರವಿದೆ ಈ ಕೋಣೆ.

Hidden ammunition storage room discovered in Red Fort
Author
Bengaluru, First Published Jul 22, 2018, 11:52 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆ.15 ರಂದು ಪ್ರಧಾನಿಗಳು ಧ್ವಜಾರೋಹಣ ಮಾಡುವ 17 ನೇ  ಶತಮಾನದ ಕೆಂಪುಕೋಟೆ ಎಲ್ಲರಿಗೂ ಗೊತ್ತು. ಆದರೆ, ಅದೇ ಕೆಂಪುಕೋಟೆಯಲ್ಲಿ ಒಂದು ಹಳೆಕಾಲದ ಗೌಪ್ಯ ಭೂಗತ ಕೋಣೆಯೊಂದಿದ್ದುದು ಕೋಟೆ ಯನ್ನು ನಿರ್ವಹಿಸುವ ಪುರಾತತ್ವಶಾಸ್ತ್ರ ಇಲಾಖೆಗೂ ಗೊತ್ತಿರಲಿಲ್ಲ. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುವ ಪೀಠಕ್ಕಿಂತ ಕೆಲವೇ ಅಡಿಗಳಷ್ಟು ದೂರದಲ್ಲಿ ಈ ಕೋಣೆ ಪತ್ತೆಯಾಗಿದೆ.

ಪೀಠದ ಸಮೀಪ ಸ್ವಚ್ಛ ಮಾಡುತ್ತಿದ್ದ ವೇಳೆ ಸಿಬ್ಬಂದಿ ಈ ಗೌಪ್ಯ ಕೋಣೆಯನ್ನು ಪತ್ತೆಹಚ್ಚಿದ್ದಾರೆ. ಬಹುಷಃ ಇದು ಮೊಗಲರ ದೊರೆ ಔರಂಗಜೇಬ್ ಕಾಲ(1658 - 1707) ದಲ್ಲಿ ನಿರ್ಮಿಸಿರಬಹುದು ಅಥವಾ1857 ರಲ್ಲಿ ಮೊಗಲರಿಂದ ಕೋಟೆ ವಶಕ್ಕೆ ಪಡೆದ ಬಳಿಕ ಬ್ರಿಟಿಷರು  ನಿರ್ಮಿಸಿರಬಹುದು. ಆರು ಮೀಟರ್ ಉದ್ದ, ಎರಡು ಮೀಟರ್ ಅಗಲ ಮತ್ತು ಮೂರು ಮೀಟರ್ ಎತ್ತರವಿದೆ ಈ ಕೋಣೆ.

ಶಸ್ತ್ರಾಸ್ತ್ರಗಳನ್ನು ಇರಿಸಲು ಈ ಕೋಣೆ ಬಳಕೆಯಾಗಿರಬಹುದು ಎನ್ನಲಾಗಿದೆ. ಆದರೆ, ಯಾವುದೇ ಹಳೆಯ ಶಸ್ತ್ರಾಸ್ತ್ರಗಳು ಲಭ್ಯವಾಗಿಲ್ಲ, ಕೋಣೆ ತುಂಬಾ ಮಣ್ಣು ತುಂಬಿತ್ತು. ಧ್ವಜಾರೋಹಣ ಪೀಠದ ಪಕ್ಕದಲ್ಲೇ ಇದ್ದರೂ, ಮಣ್ಣಿನ ದಿಬ್ಬ ಆವರಿಸಿದ್ದುದರಿಂದ ಇಲ್ಲಿ ವರೆಗೂ ಇಲ್ಲೊಂದು ಇಂತಹ ಗೌಪ್ಯ ಕೋಣೆಯಿದೆ ಎಂದು ಯಾರಿಗೂ ಗೊತ್ತಾಗಿರಲಿಲ್ಲ.

Follow Us:
Download App:
  • android
  • ios