Asianet Suvarna News Asianet Suvarna News

1971ರ ಯುದ್ಧದಲ್ಲಿ ಪಾಕ್ ಪಡೆಯನ್ನ ಮಣಿಸಿದ್ದ ಭಾರತದ ಹೀರೋ ಇನ್ನಿಲ್ಲ

1971ರ ಯುದ್ಧದಲ್ಲಿ ಪಾಕ್ ಪಡೆಯನ್ನ ಮಣಿಸಿದ್ದ ಭಾರತದ ಹೀರೋ ಬ್ರಿಗೇಡಿಯರ್​ ಕುಲದೀಪ್​ ಸಿಂಗ್​ ಚಂದ್​ಪುರಿ (78) ನಿಧನರಾಗಿದ್ದಾರೆ.

Hero of Battle of Longewala Brigadier Kuldip Singh Chandpuri passes away
Author
Bengaluru, First Published Nov 17, 2018, 7:58 PM IST

ಚಂಡೀಗಢ, [ನ.17]: 1997ರಲ್ಲಿ ತೆರೆಕಂಡಿದ್ದ ಸೂಪರ್​ಹಿಟ್​ ಬಾರ್ಡರ್​  ಚಿತ್ರಕ್ಕೆ ಸ್ಪೂರ್ತಿಯಾಗಿದ್ದ 1971ರ ಭಾರತ-ಪಾಕಿಸ್ತಾನ ಯುದ್ಧದ ಹೀರೋ ಬ್ರಿಗೇಡಿಯರ್​ ಕುಲದೀಪ್​ ಸಿಂಗ್​ ಚಂದ್​ಪುರಿ (78) ಅವರು ವಿಧಿವಶರಾಗಿದ್ದಾರೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಚಂದ್​ಪುರಿ ಅವರು ಪಂಜಾಬ್​ನ ಮೊಹಾಲಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಇಂದು [ಶನಿವಾರ] ಸಂಜೆ ಕೊನೆಯುಸಿರೆಳೆದಿದ್ದಾರೆ. ಕುಲದೀಪ್​ ಸಿಂಗ್​ ಚಂದ್​ಪುರಿ ಅವರು ಲಾಂಗೆವಾಲಾ ಯುದ್ಧದ ಮೂಲಕ ಹೆಸರು ವಾಸಿಯಾಗಿದ್ದರು.

1971ರ ಡಿಸೆಂಬರ್​ 4ರ ರಾತ್ರಿ ರಾಜಸ್ಥಾನದ ಲಾಂಗೆವಾಲಾ ಗಡಿಯಲ್ಲಿ 40 ಟ್ಯಾಂಕ್​ಗಳೊಂದಿಗೆ ಬಂದಿದ್ದ 2,000 ಪಾಕಿಸ್ತಾನಿ ಸೈನಿಕರನ್ನು ಕುಲದೀಪ್​ ಸಿಂಗ್​ ನೇತೃತ್ವದ 100 ಕ್ಕೂ ಹೆಚ್ಚು ಭಾರತೀಯ ಸೈನಿಕರಿದ್ದ ಸಣ್ಣ ತುಕಡಿ ಮಣಿಸಿತ್ತು.

Follow Us:
Download App:
  • android
  • ios