ಇನ್ನು ಮುಂದೆ ರಾಜ್ಯದಲ್ಲಿ ಬೀಡಿ, ಸಿಗರೇಟ್‌ಗಳನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನವದೆಹಲಿ(ಸೆ.29): ಇನ್ನು ಮುಂದೆ ರಾಜ್ಯದಲ್ಲಿ ಬೀಡಿ, ಸಿಗರೇಟ್ಗಳನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ ಸೂಕ್ತ ರೀತಿಯಲ್ಲಿ ಜಾರಿಯಾಗದಿರುವುದರಿಂದ ತಂಬಾಕು ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡಿ ಬಿಡಿಯಾಗಿ ಬೀಡಿ ಸಿಗರೇಟು ಮಾರಾಟ ಮಾಡುವುದನ್ನು ನಿಲ್ಲಿಸಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಇನ್ನುಮುಂದೆ ಯಾವುದೇ ಅಂಗಡಿ ಮತ್ತು ಮಾರಾಟಗಾರರು ತಂಬಾಕು ಮತ್ತು ಬೀಡಿ, ಸಿಗರೇಟ್ಗಳನ್ನು ಎಲ್ಲಿಯೂ ಬಿಡಿಯಾಗಿ ಮಾರಾಟ ಮಾಡುವಂತಿಲ್ಲ.
ಇಡೀ ಪ್ಯಾಕ್ ಮಾರಾಟ ಮಾಡಬೇಕು ಎಂದು ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಇದನ್ನು ಅಂಗಡಿಗಳು ಕಡ್ಡಾಯವಾಗಿ ಜಾರಿಗೊಳಿಸಬೇಕಿದ್ದು, ನಿಯಮ ಮೀರಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ.
ಈ ನಿಯಮ ಏಕೆ?
ರಾಜ್ಯದಲ್ಲಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಜಾಹಿರಾತು ನಿಷೇಧ ಹಾಗೂ ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆ ನಿಬಂಧನೆ) 2003ರ ನಿಯಮ 7 ಮತ್ತು 8ರ ಪ್ರಕಾರ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇ.85ರಷ್ಟು ಭಾಗದಲ್ಲಿ ತಂಬಾಕಿನ ದುಷ್ಪರಿಣಾಮಗಳನ್ನು ಹೇಳುವ, ಎಚ್ಚರಿಸುವ ಚಿತ್ರಗಳಿರಬೇಕು. ಆದರೆ, ಶೇ.70ಮಂದಿ ಉತ್ಪನ್ನ ವನ್ನು ಬಿಡಿಯಾಗಿಯೇ ಖರೀದಿಸುತ್ತಾರೆ.
ಇದರಿಂದ ಬಹುತೇಕ ಮಂದಿ ಪ್ಯಾಕೆಟ್'ಗಳ ಮೇಲೆ ದಾಖಲಿಸಿರುವ ತಂಬಾಕು ದುಷ್ಪರಿಣಾಮ ಚಿತ್ರಗಳನ್ನು ನೋಡುತ್ತಲೇ ಇಲ್ಲ. ಆದ್ದರಿಂದ ಗ್ರಾಹಕರು ತಂಬಾಕು, ಸಿಗರೇಟ್ಗಳನ್ನು ಪ್ಯಾಕೇಟ್ ಸಹಿತ ಖರೀದಿಸಬೇಕು. ಅದರಲ್ಲಿರುವ ಚಿತ್ರಗಳನ್ನು ನೋಡಿ ಮನಃಪರಿವರ್ತನೆ ಆಗಬೇಕೆನ್ನುವ ಉದ್ದೇಶದಿಂದ ಬಿಡಿ ಬಿಡಿಯಾಗಿ ಈ ಪದಾರ್ಥಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಯುವಕರು, ವಿದ್ಯಾರ್ಥಿಗಳು ಸಿಗರೇಟ್ ಮತ್ತು ತಂಬಾಕು ಉತ್ಪನ್ನ ಬಳಸುವುದು ಹೆಚ್ಚಾಗುತ್ತಿದ್ದು, ಇವರು ಇಡೀ ಪ್ಯಾಕೇಟ್ ಸಹಿತ ಖರೀದಿಸಬೇಕಾದರೆ ದುಬಾರಿ ಯಾಗುತ್ತದೆ. ದುಬಾರಿ ಎಂಬ ಕಾರಣಕ್ಕೆ ಈ ಚಟದಿಂದ ಕೆಲವರಾದರೂ ಮುಕ್ತರಾಗಬಹುದು ಎಂಬುದು ಆರೋಗ್ಯ ಇಲಾಖೆಯ ಆಶಯ.
ಈ ಹೊಸ ನಿಯಮ ದಿಂದ ತಂಬಾಕು, ಸಿಗರೇಟ್ ಮಾರಾಟ ಕಡಿಮೆಯಾಗಿ ಮಾರಾಟಗಾರರಿಗೆ ಕೊಂಚ ನಷ್ಟವಾಗಬಹುದು. ಆದರೆ ಹಾಗೆಯೇ ಹೆಚ್ಚು ಪ್ಯಾಕೆಟ್ ಸಹಿತ ಮಾರಾಟ ಆಗುವುದ ರಿಂದ ಮಾರಾಟಗಾರರಿಗೆ ಲಾ‘ವೂ ಉಂಟಾಗಬ ಹುದು. ಏನೇ ಆದರೂ ಜನರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯುವುದು ಇಲಾಖೆ ಉದ್ದೇಶವಾಗಿದೆ. ಆದ್ದರಿಂದ ಇದನ್ನು ಮಾರಾಟಗಾರರು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸಲಾಗು ತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
