ಕೆಎಸ್‌ಆರ್‌'ಟಿಸಿ ಬಸ್‌ಗಳಿನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಮಾಸಿಕ ಪಾಸು ತೋರಿಸುವ ಅಥವಾ ನಗದು ಪಾವತಿಸಬೇಕಾದ ಪ್ರಮೇಯವೂ ಇನ್ನಿಲ್ಲ. ಟೋಲ್‌ ಗೇಟ್‌'ಗಳಲ್ಲಿ ಸಂಚಾರ ದಟ್ಟಣೆ, ವೃಥಾ ವಿಳಂಬಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸಾರಿಗೆ ಸಂಸ್ಥೆ ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಕಾರ್ಡ್‌ಗಳ ಬಳಕೆ ಆರಂಭಿಸಿದೆ.

ಈ ಹೊಸ ವ್ಯವಸ್ಥೆಯಿಂದಾಗಿ ಸರ್ಕಾರಿ ಬಸ್ಸುಗಳು ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ ಟ್ರ್ಯಾಕ್ ಲೇನ್‌ಗಳಲ್ಲಿ ತಡೆರಹಿತವಾಗಿ ಸಂಚರಿಸಲಿವೆ. ಸಾರಿಗೆ ವಾಹನಗಳಲ್ಲಿ ಟೋಲ್ ಪಾವತಿಗೆ ಸದ್ಯ ಪ್ರೀಪೇಯ್ಡ್ ಕಾರ್ಡ್ ಸೌಲಭ್ಯ ಇದೆ, ಆದರೆ ಪೋಸ್ಟ್ ಪೇಯ್ಡ್ ಕಾರ್ಡ್ ಬಳಸುತ್ತಿರುವುದು ಇದೇ ಮೊದಲು. ಭಾರತೀಯ ಹೆದ್ದಾರಿಗಳ ನಿರ್ವಹಣಾ ಕಂಪನಿ ಸಹಯೋಗದಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ಏನಿದು ಫಾಸ್ಟ್ ಟ್ಯಾಗ್ ಕಾರ್ಡ್?:

ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲಿ ವಿನ್ಯಾಸಗೊಳಿಸಿದ ಕಾರ್ಡ್ ಇದು. ವಾಹನದ ಸಂಖ್ಯೆ, ಡಿಪೋ ಹಾಗೂ ವಿಭಾಗದ ಹೆಸರನ್ನು ಇದು ಒಳಗೊಂಡಿರುತ್ತದೆ. ಈ ಕಾರ್ಡ್ ಅನ್ನು ಬಸ್‌ನ ಮುಂಭಾಗದ ಕನ್ನಡಿಯ ಮೇಲ್ಭಾಗದಲ್ಲಿ ಅಂಟಿಸಿರುತ್ತಾರೆ. ಬಸ್ ಟೋಲ್ ಕೇಂದ್ರವನ್ನು ದಾಟುತ್ತಿದ್ದಂತೆ ಪ್ಲಾಜಾದ ಮೇಲ್ಭಾಗದಲ್ಲಿ ಅಳವಡಿಸಿದ ಆರ್‌ಪಿಎ್ಫ್(ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಡಿವೈಸ್)ರೀಡರ್ ಕಾರ್ಡ್‌ನಲ್ಲಿರುವ ವಿವರವನ್ನು ಸ್ವಯಂ ಆಗಿ ದಾಖಲಿಸುತ್ತದೆ. ನಂತರ ಈ ವಿವರಗಳನ್ನು ಇ-ಮೇಲ್ ಮೂಲಕ ಐಡಿಎ್‌ಸಿ ಬ್ಯಾಂಕ್‌ಗೆ ಟೋಲ್‌ಪ್ಲಾಜಾದಿಂದ ಕಳುಹಿಸಲಾಗುತ್ತದೆ. ಬ್ಯಾಂಕ್‌ನಿಂದ ಆಯಾ ಬಸ್‌ಗಳ ವಿಭಾಗದ ಡಿಪೋಗಳಿಗೆ ಇ-ಮೇಲ್‌ನಲ್ಲಿ ರವಾನೆಯಾಗುತ್ತದೆ. ಅದನ್ನು ಸ್ವೀಕರಿಸುವ ವಿಭಾಗದ ಅಧಿಕಾರಿಗಳು ಆನ್‌'ಲೈನಲ್ಲಿ ಹಣ ಪಾವತಿಸುತ್ತಾರೆ.