Asianet Suvarna News Asianet Suvarna News

ಅನರ್ಹ ಶಾಸಕರ ದಿಢೀರ್ ದೆಹಲಿ ಟೂರ್ ಹಿಂದಿನ ರಹಸ್ಯವೇನು? ಇಲ್ಲಿದೆ ಅಸಲಿ ಕಾರಣ

ಯಡಿಯೂರಪ್ಪ ಸರ್ಕಾರದ ಮಂತ್ರಿ ಮಂಡಲ ರಚನೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಅನರ್ಹಗೊಂಡಿರುವ ಶಾಸಕರು ದಿಢೀರ್ ದೆಹಲಿಗೆ ಹಾರಿದ್ದಾರೆ. ರೆಬೆಲ್ ಲೀಡರ್ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಿದ್ದ ಅನರ್ಹ ಶಾಸಕರು, ಬುಧವಾರ ಒಬ್ಬೊಬ್ಬರಾಗಿ ದೆಹಲಿಗೆ ತೆರಳಿದ್ದಾರೆ. ಹಾಗಾದ್ರೆ ಈ ದೆಹಲಿ ಪ್ರವಾಸದ ಹಿಂದಿನ ರಹಸ್ಯವೇನು..? ಮುಂದಿದೆ ನೋಡಿ ಅಸಲಿ ಕಾರಣ.

Here is reason Why Congress JDS disqualified MLAs travel to delhi
Author
Bengaluru, First Published Aug 21, 2019, 8:10 PM IST
  • Facebook
  • Twitter
  • Whatsapp

ಬೆಂಗಳೂರು, [ಆ.21]: ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಗದ  ಶಾಸಕರು ಮುನಿಸಿಕೊಂಡು ಗಪ್ ಚುಪ್ ಕುಳಿತುಕೊಂಡಿದ್ದಾರೆ.

ಇದರ ಮಧ್ಯೆ ಅನರ್ಹ ಶಾಸಕರು  ಎರಡು ಟೀಂ ಮಾಡಿಕೊಂಡು ದೆಹಲಿಗೆ ಹಾರಿದ್ದಾರೆ. ಸಾಲದಕ್ಕೆ ಇವರುಗಳ ಜತೆ ಬಿಜೆಪಿ ನಾಯಕ, ಅನರ್ಹ ಶಾಸಕರ ಕ್ಯಾಪ್ಟನ್ ಶಿಪ್ ವಹಿಸಿಕೊಂಡಿರುವ ಸಿ.ಪಿ.ಯೋಗೇಶ್ವರ್ ಸಹ ದೆಹಲಿಗೆ ಹೋಗಿರುವುದು  ರಾಜ್ಯ ರಾಜಕಾರಣದಲ್ಲಿ ಬೇರೆ ಸಂಚಲನವೇ ಮೂಡಿಸಿದೆ.  

ಏನಪ್ಪಾ ಅಂದ್ರೆ, ಹೇಳಿದವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಅನರ್ಹ ಶಾಸಕರೆಲ್ಲರೂ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ತೆರಳಿದ್ದಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿವೆ. ಆದ್ರೆ ಅನರ್ಹರು ದೆಹಲಿಗೆ ಹೋದ ಅಸಲಿ ಕಾರಣವೇ ಬೇರೆ ಇದೆ.

BJP ನಾಯಕನನ್ನು ಕರ್ಕೊಂಡು ದಿಢೀರ್ ದೆಹಲಿಗೆ ಹಾರಿದ ಅನರ್ಹ ಶಾಸಕರು

ಅನರ್ಹರು ದಿಢೀರ್ ದೆಹಲಿಗೆ ಹೋಗಿದ್ಯಾಕೆ?
ಅನರ್ಹ ಶಾಸಕರು ಸಲ್ಲಿಸಿರುವ ಮೇಲ್ಮನೆಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಿರಾಕರಿಸಿರುವ ಹಿನ್ನೆಲೆಯಲ್ಲಿ 17 ಮಂದಿ ಶಾಸಕರು ದೆಹಲಿಗೆ ತೆರಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಅಡಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ತಮ್ಮ ರಾಜಕೀಯ ನಡೆಯನ್ನು ಭದ್ರಪಡಿಸಿಕೊಳ್ಳುವ ತರಾತುರಿಯಲ್ಲಿರುವ ಅನರ್ಹರು, ನಾಳೆ ಅಂದ್ರೆ ಗುರುವಾರ ದೆಹಲಿಯಲ್ಲಿ ತಮ್ಮ ವಕೀಲರಾದ ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಲಿದ್ದು, ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಕೇಸ್ ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹಿನ್ನೆಲೆಯಲ್ಲಿ ಅನರ್ಹರು ದೆಹಲಿ ಟೂರ್ ಹೋಗಿದ್ದಾರೆ.

ಸ್ಪೀಕರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಲು
ಹೌದು..ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿದ್ದರು. ಇದರಿಂದ ಇವರನ್ನು ಅನರ್ಹಗೊಳಿಸಬೇಕೆಂದು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಗೆ ಕಾಂಗ್ರೆಸ್-ಜೆಡಿಎಸ್ ದೂರು ನೀಡಿತ್ತು.

ಇದರ ಅನ್ವಯ ರಮೇಶ್ ಕುಮಾರ್ ಅವರು 17 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಶಾಸಕ ಸ್ಥಾನದಿಂದ ಅನರ್ಹ ಮಾಡಿದ್ದರು. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ಬಾಕಿ ಇದೆ. ಇದರಿಂದ ಅತೃಪ್ತರು ದೆಹಲಿಗೆ ಹೋಗಿದ್ದಾರೆ ಅಷ್ಟೇ.

Follow Us:
Download App:
  • android
  • ios