ಶ್ರೀ ದೇವಿ ಹಾಗೂ ಮೋನಾ ಕಪೂರ್ ಸಾವಿನ ಸಾಮ್ಯತೆ ಏನು..?

Here is a sad Connection fate between Boney Kapoors first wife Mona and Sridevi
Highlights

ಬಾಲಿವುಡ್ ನಟಿ ಶ್ರೀ ದೇವಿ ಸಾವು ಎಲ್ಲರಿಗೂ ಕೂಡ ಆಘಾತವನ್ನುಂಟು ಮಾಡಿದೆ. ದುಬೈನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆ ಸಂಭವಿಸಿದ ಶ್ರೀ ದೇವಿ ಸಾವು ಬಿಗ್ ಶಾಕ್’ನಂತಾಗಿದೆ.

ಮುಂಬೈ : ಬಾಲಿವುಡ್ ನಟಿ ಶ್ರೀ ದೇವಿ ಸಾವು ಎಲ್ಲರಿಗೂ ಕೂಡ ಆಘಾತವನ್ನುಂಟು ಮಾಡಿದೆ. ದುಬೈನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆ ಸಂಭವಿಸಿದ ಶ್ರೀ ದೇವಿ ಸಾವು ಬಿಗ್ ಶಾಕ್’ನಂತಾಗಿದೆ.

1996ರಲ್ಲಿ ಬೋನಿ ಕಪೂರ್ ಶ್ರೀ ದೇವಿ ಜೊತೆ ವಿವಾಹವಾಗುವುದಕ್ಕೂ ಮೊದಲು ಮೋನಾ ಕಪೂರ್ ಅವರನ್ನು ವಿವಾಹವಾಗಿದ್ದರು. ಅರ್ಜುನ್ ಕಪೂರ್ ಹಾಗೂ ಅನ್ಶುಲ ಎಂಬ  ಇಬ್ಬರು ಮಕ್ಕಳು ಮೋನಾ ಹಾಗೂ ಬೋನಿ ಕಪೂರ್ ದಂಪತಿಗೆ ಜನಿಸಿದ್ದರು. ಬಳಿಕ ಬೋನಿ ಕಪೂರ್ ಮೋನಾ ಕಪೂರ್’ಗೆ ವಿಚ್ಛೇದನ ನೀಡಿದರು.

ಮೋನಾ ಕಪೂರ್ 2012ರಲ್ಲಿ  ಮೃತಪಟ್ಟಿದ್ದು, ಅವರ ಪುತ್ರ ಅರ್ಜುನ್ ಕಪೂರ್ ಮೊದಲ ಚಿತ್ರವನ್ನೂ ನೋಡುವ ಭಾಗ್ಯವೂ ಕೂಡ ಅವರಿಗೆ ದೊರಕಲಿಲ್ಲ. ಮಗನ ಮೊದಲ ಚಿತ್ರ ನೋಡುವ ಮೊದಲೇ ಮೋನಾ ಇಹಲೋಕ ತ್ಯಜಿಸಿದರು. ಇದೀಗ ಶ್ರೀದೇವಿ ಅವರಿಗೂ ಕೂಡ ಪುತ್ರಿ  ಜಾಹ್ನವಿ ಕಪೂರ್ ಅವರ ಚಿತ್ರ ದಡಕ್ ಚಿತ್ರ ವೀಕ್ಷಿಸುವ ಭಾಗ್ಯವೂ ಕೂಡ ಸಿಗಲಿಲ್ಲ.

ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದ  ಚಿತ್ರದಲ್ಲಿ ಶ್ರೀ ದೇವಿ ಅವರ ಹಿರಿಯ ಪುತ್ರಿ ಜಾಹ್ನವಿ ನಟಿಸುತ್ತಿದ್ದು, ಅದು ಪೂರ್ಣವಾಗುವ ಮೊದಲು ಶ್ರೀ ದೇವಿ ಇಹಲೋಕ ತ್ಯಜಿಸಿದ್ದಾರೆ.

loader