ಚಿತ್ರರಂಗದ ಬೇರೆಲ್ಲಾ ನಟಿಯರಿಗೆ ಹೋಲಿಸಿದರೆ ಕರಿನಾ ಕಪೂರ್ ಪ್ರಗ್ನೆನ್ಸಿ ಹೆಚ್ಚು ಸುದ್ದಿಯಾಗಿತ್ತು. ಹೆಚ್ಚಿನವರು ಇಂತಹ ಸಂದರ್ಭದಲ್ಲಿ ಮಾಧ್ಯಮಗಳಿಂದ, ಸುದ್ದಿಯಿಂದ ದೂರವೇ ಉಳಿದಿರುತ್ತಾರೆ. ಆದರೆ ಕರೀನಾ ಮಾತ್ರ ದೂರ ಉಳಿದಿರಲಿಲ್ಲ. ಬೇರೆಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗುವಂತಿದ್ದರು.  ಇತ್ತೀಚಿಗೆ ಎವೆರಿ ಚೈಲ್ಡ್ ಅಲೈವ್ ಎನ್ನುವ ಅಭಿಯಾನ ಶುರು ಮಾಡಿದ ಕರೀನಾ ತಾಯ್ತನದ ಬಗ್ಗೆ ಒಂದಷ್ಟು ಸಲಹೆ ನೀಡಿದ್ದಾರೆ. 

ಮುಂಬೈ (ಫೆ.23): ಚಿತ್ರರಂಗದ ಬೇರೆಲ್ಲಾ ನಟಿಯರಿಗೆ ಹೋಲಿಸಿದರೆ ಕರಿನಾ ಕಪೂರ್ ಪ್ರಗ್ನೆನ್ಸಿ ಹೆಚ್ಚು ಸುದ್ದಿಯಾಗಿತ್ತು. ಹೆಚ್ಚಿನವರು ಇಂತಹ ಸಂದರ್ಭದಲ್ಲಿ ಮಾಧ್ಯಮಗಳಿಂದ, ಸುದ್ದಿಯಿಂದ ದೂರವೇ ಉಳಿದಿರುತ್ತಾರೆ. ಆದರೆ ಕರೀನಾ ಮಾತ್ರ ದೂರ ಉಳಿದಿರಲಿಲ್ಲ. ಬೇರೆಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗುವಂತಿದ್ದರು. ಇತ್ತೀಚಿಗೆ ಎವೆರಿ ಚೈಲ್ಡ್ ಅಲೈವ್ ಎನ್ನುವ ಅಭಿಯಾನ ಶುರು ಮಾಡಿದ ಕರೀನಾ ತಾಯ್ತನದ ಬಗ್ಗೆ ಒಂದಷ್ಟು ಸಲಹೆ ನೀಡಿದ್ದಾರೆ. 

* ನವಜಾತ ಶಿಶುಗಳಿಗೆ ಸರಿಯಾದ ರೀತಿಯಲ್ಲಿ ಹಾಲುಣಿಸಿ. ಹುಟ್ಟಿದ ಒಂದು ತಾಸಿನೊಳಗೆ ಹಾಲುಣಿಸಿ. ಒಂದು ವರ್ಷದವರೆಗೆ ಹಾಲನ್ನು ಬಿಟ್ಟು ಬೇರೇನೂ ಕೊಡಬೇಡಿ. 
* ಮೂಢನಂಬಿಕೆಗಳನ್ನು ನಂಬಿ ಅಪಾಯಕಾರಿ ಪದ್ಧತಿಗಳನ್ನು ಮಗುವಿನ ಮೇಲೆ ಪ್ರಯೋಗಿಸಬೇಡಿ. 
* ಗಂಡು ಮಗುವನ್ನು ನೋಡಿಕೊಂಡಷ್ಟೇ ಕಾಳಜಿಯಿಂದ ಹೆಣ್ಣು ಮಗುವನ್ನು ನೋಡಿಕೊಳ್ಳಿ. ತಾರತಮ್ಯ ಮಾಡಬೇಡಿ.