ಒಂದು ಮನೆ ಅಂದ್ಮೇಲೆ  ಒಂದು ವಸ್ತು ಬೇಕಾಗುತ್ತೆ , ಒಂದು ಬೇಡವಾಗಿರುತ್ತೆ. ಕೆಲವರಿಗೆ ಬೇಡ ಅಂತ  ಎಸೆದಿರುವ ವಸ್ತು ಬಡವರ ಪಾಲಿಗೆ ಮೃಷ್ಠಾನ್ನವಾಗಬಹುದು. ನಿರ್ಗತಿಕರಿಗೆ ಆಸರೆಯಾಗಬಹುದು. ಈ ಕಾರಣಕ್ಕಾಗಿಯೇ ಕಾಫಿನಾಡು ಚಿಕ್ಕಮಗಳೂರಲ್ಲಿ ಬಡವರಿಗೆ ನೆರವಾಗುವ ವಿನೂತನ ಪ್ರಯೋಗಕ್ಕೆ ಎಸ್ಪಿ ಅಣ್ಣಾಮಲೈ ಚಾಲನೆ ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಚಿಕ್ಕಮಗಳೂರು(ಸೆ.04): ಕೆಲವು ವಸ್ತುಗಳು ನಮ್ಗೆ ಬೇಡ ಅಂತ ಮೂಲೆಗೆ ಎಸೆಯುವುದು ಸಾಮಾನ್ಯ. ಆದರೆ ಯಾರಿಗೋ ಬೇಡವಾದ ವಸ್ತು , ಮತ್ತೊಬ್ಬರಿಗೆ ಅಗತ್ಯ ಬೀಳಬಹುದು. ಹೀಗಾಗಿ ಕಾಫಿನಾಡಿನ 7 ಮಂದಿ ತಂಡ ‘ಹೆಲ್ಪಿಂಗ್ ವಾಲ್’ ಹೆಸರಿನಲ್ಲಿ ಹಳೇ ವಸ್ತುಗಳನ್ನು ಸಂಗ್ರಹಿಸಿ ,ಅದರ ಅಗತ್ಯವಿರುವರಿಗೆ ಉಚಿತವಾಗಿ ನೀಡುವ ವಿನೂತನ ಯೋಜನೆಗೆ ಚಾಲನೆ ನೀಡಿದ್ದಾರೆ. ಇದಕ್ಕೆ ಚಿಕ್ಕಮಗಳೂರು ಎಸ್​'ಪಿ ಅಣ್ಣಾಮಲೈ ಸಾಥ್​ ನೀಡಿದ್ದಾರೆ.

ಇದು ಚಿಕ್ಕಮಗಳೂರಿನ ಹಳೇ ನಗರ ಠಾಣೆ. ಹೊಸ ಸ್ಟೇಷನ್ ಆದ್ಮೇಲೆ ಒಂದು ವರ್ಷದಿಂದ ಪಾಳು ಬಿದ್ದಿತ್ತು. ಇದೀಗ ಎಸ್ಪಿ ಅಣ್ಣಾಮಲೈ ಈ ಸ್ಟೇಷ'ನ್‍ಗೆ ಹೆಲ್ಪಿಂಗ್ ವಾಲ್ ಎನ್ನುವ ಅರ್ಥಪೂರ್ಣ ಯೋಜನೆಗೆ ಚಾಲನೆ ನೀಡಿ ಪಾಳುಬಿದ್ದ ಠಾಣೆಗೆ ಕಾಯಕಲ್ಪ ನೀಡಿದ್ದಾರೆ. ಇದರಲ್ಲಿ ಕಾಫಿನಾಡಿನ ಜನ್ರು ತಮಗೆ ಬೇಡವಾದ ವಸ್ತುವನ್ನು ಈ ಹೆಲ್ಪಿಂಗ್ ವಾ'ಲ್‍ನಲ್ಲಿ ಇಡಬಹುದು. ಆ ವಸ್ತು ಯಾರಿಗೆ ಅಗತ್ಯ ಇರುತ್ತೋ ಅವರು ತೆಗೆದುಕೊಂಡು ಹೋಗ್ತಾರೆ. ಎಸ್ಪಿ ಅಣ್ಣಾಮಲೈ ಈ ಕೊಡುಕೊಳ್ಳುವಿಕೆಗೆ ಸಂಪರ್ಕ ಸೇತುವೆಯಾಗಲಿದ್ದಾರೆ. ಬುಕ್ಸ್, ಬಟ್ಟೆ, ಪಿಠೋಪಕರಣಗಳು, ಪೆನ್, ಪೆನ್ಸಿಲ್, ಆಹಾರ ಪದಾರ್ಥ, ಹೊದಿಕೆ ಸೇರಿದಂತೆ ಯಾವ್ದೆ ವಸ್ತುಗಳು, ಬೇಡ ಅನ್ಸಿದ್ರೆ ಇಲ್ಲಿಗೆ ತಂದು ಇಡಬಹುದು. ಅವುಗಳ ಅಗತ್ಯವಿರೋ ಬಡವರು, ನಿರ್ಗತಿಕರು ಅದನ್ನ ಉಚಿತವಾಗಿ ಪಡೆದುಕೊಳ್ತಾರೆ.

ಚಿಕ್ಕಮಗಳೂರಿನಲ್ಲೆ ಶಿಕ್ಷಣ ಪಡೆದು ಬೆಂಗಳೂರು, ಯುಎಸ್'ಎ ಯಲ್ಲಿ ಕೆಲಸ ಮಾಡ್ತಾ ಇರೋ 7 ಮಂದಿ ತಂಡ. ಈ ಹೊಸ ಪ್ರಾಜೆಕ್ಟ್ ರೆಡಿ ಮಾಡಿ ಎಸ್ಪಿ ಅಣ್ಣಾಮಲೈ ಮುಂದೆ ಇಟ್ಟಿದ್ರು, ಇದಕ್ಕೆ ಬೆಂಬಲ ನೀಡಿದ ಎಸ್ಪಿ ಕ್ರೆಡೆನ್ಸ್ ಹೆಲ್ಪಿಂಗ್ ಹಾಂಡ್ಸ್ ಆನಾವರಣಗೊಳ್ಳೋಕೆ ಸಾಥ್ ನೀಡಿದ್ರು.

ಪ್ರಾರಂಭದ ದಿನವೇ ಹೊಸ ಪ್ರಾಜೆಕ್ಟ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಅಣ್ಣಾಮಲೈ ಅವರ ಕಾರ್ಯಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ. ಒಟ್ಟಾರೆ ದೇಶದಲ್ಲೇ ಮೊದಲ ಭಾರೀ ಜಾರಿಯಾದ ಅರ್ಥಪೂರ್ಣ ಯೋಜನೆ, ಸಮರ್ಪಕವಾಗಿ ಜಾರಿಗೆ ಬಂದು, ಬಡವರಿಗೆ, ನಿರ್ಗತಿಕರಿಗೆ ನೆರವಾಗಲಿ ಅನ್ನೋದೇ ನಮ್ಮ ಆಶಯ .