ಸುವರ್ಣ ನ್ಯೂಸ್’ನ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೈತ ಬಸವರಾಜ ಹೂಗಾರ್ ಕೃಷಿ ಹೊಂಡದ ಬಿಲ್ ಮಂಜೂರಾತಿಗೆ ಸಹಾಯಕ ಕೃಷಿ ಅಧಿಕಾರಿ ಎನ್.ವೈ. ಹಿರೇಹಾಳ 25 ಸಾವಿರ ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದರು.

ಬೆಂಗಳೂರು (ಏ.25): ಕೃಷಿ ಹೊಂಡದ ಬಿಲ್ ಮಂಜೂರಾತಿಗೆ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿದಂತೆ ಕೊಪ್ಪಳ ಕೃಷಿ ನಿರ್ದೆಶಕರ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ.

ಇದೇ ತಿಂಗಳು 16ರಂದು ಸುವರ್ಣ ನ್ಯೂಸ್’ನ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೈತ ಬಸವರಾಜ ಹೂಗಾರ್ ಕೃಷಿ ಹೊಂಡದ ಬಿಲ್ ಮಂಜೂರಾತಿಗೆ ಸಹಾಯಕ ಕೃಷಿ ಅಧಿಕಾರಿ ಎನ್.ವೈ. ಹಿರೇಹಾಳ 25 ಸಾವಿರ ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಳಗಾವಿ ಕೃಷಿ ಇಲಾಖೆಯ ಜಾಗೃತ ಕೋಶದ ಜಂಟಿ ಕೃಷಿ ನಿರ್ದೆಶಕ ಎಂ.ಎಸ್. ದಿವಾಕರ್ ತನಿಖೆ ನಡೆಸುತ್ತಿದ್ದಾರೆ. ರೈತರಿಂದ ಮಾಹಿತಿ ಪಡೆದ ಅಧಿಕಾರಿಗಳು ಲಂಚ ಕೇಳಿದ ಅಧಿಕಾರಿಯ ವಿಚಾರಣೆ ನಡೆಸಿದ್ದಾರೆ.