ಆಕಾಶ ದಸರಾ ಕಾರ್ಯಕ್ರಮದ ಅಡಿಯಲ್ಲಿ ನಿತ್ಯ ಹೆಲಿಕಾಪ್ಟರ್'ಗಳು ಅರಮನೆ ಮೇಲೆ ಹಾರಾಟ ನಡೆಸುವುದು ಜಂಬೂ ಸವಾರಿ ಆನೆಗಳಿಗೆ ತೊಂದರೆಯಾಗುತ್ತಿದ್ದು, ಇದು ಜಂಬೂ ಸವಾರಿ ಮೇಲೆ ಪರಿಣಾಮ ಬೀರಲಿದೆ ಎಂದು ಅರಣ್ಯ ಅಧಿಕಾರಿಗಳ ಮಾಹಿತಿ ಮೇರೆಗೆ ಸುದ್ದಿ ಪ್ರಸಾರ ಮಾಡಿತ್ತು.

ಮೈಸೂರು(ಸೆ.26): ಜಂಬೂ ಸವಾರಿ ದಿನ ಅರಮನೆ ಮೇಲೆ ಹೆಲಿಕಾಪ್ಟರ್ ಹಾರಟವನ್ನು ರದ್ದು ಮಾಡಲಾಗಿದೆ.

ಜಂಬೂ ಸವಾರಿಯ ಆನೆಗಳು ಹೆಲಿಕಾಪ್ಟರ್ ಸದ್ದಿಗೆ ಹೆದರುವುದರಿಂದ ಸೆಪ್ಟಂಬರ್ 30 ರಂದು ಅಂಬಾವಿಲಾಸ ಅರಮನೆ ಮೇಲೆ ಹೆಲಿಕಾಪ್ಟರ್ ಹಾರಾಟವನ್ನು ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಹೇಳಿದ್ದಾರೆ.

ಈ ಬಗ್ಗೆ ನಿಮ್ಮ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಆಕಾಶ ದಸರಾ ಕಾರ್ಯಕ್ರಮದ ಅಡಿಯಲ್ಲಿ ನಿತ್ಯ ಹೆಲಿಕಾಪ್ಟರ್'ಗಳು ಅರಮನೆ ಮೇಲೆ ಹಾರಾಟ ನಡೆಸುವುದು ಜಂಬೂ ಸವಾರಿ ಆನೆಗಳಿಗೆ ತೊಂದರೆಯಾಗುತ್ತಿದ್ದು, ಇದು ಜಂಬೂ ಸವಾರಿ ಮೇಲೆ ಪರಿಣಾಮ ಬೀರಲಿದೆ ಎಂದು ಅರಣ್ಯ ಅಧಿಕಾರಿಗಳ ಮಾಹಿತಿ ಮೇರೆಗೆ ಸುದ್ದಿ ಪ್ರಸಾರ ಮಾಡಿತ್ತು. ಈಗ ನಮ್ಮ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಜಂಬೂ ಸವಾರಿ ದಿನ ಅರಮನೆ ಮೇಲೆ ಯಾವುದೇ ಹೆಲಿಕಾಪ್ಟರ್ ಹಾರಾಟ ನಡೆಸಲು ಅವಕಾಶ ಇಲ್ಲ ಎಂದಿದ್ದಾರೆ. ಹೀಗಾಗಿಯೇ ಸೆಪ್ಟಂಬರ್ 29 ರಂದೇ ವಾಯುಸೇನೆಯ ಹೆಲಿಕಾಪ್ಟರ್'ಗಳು ಸಾಹಸ ಪ್ರದರ್ಶನಗಳನ್ನು ನಡೆಸಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.