ಅಪಘಾತಕ್ಕೀಡಾದ ಹೆಲಿಕಾಪ್ಟರ್‌ ಮುಂಬೈನ ಕ್ಯಾಸಲ್ ಏವಿಯೇಷನ್ ಕಂಪನಿಯದಾಗಿದ್ದು ಬದರೀನಾಥ್‌ನಿಂದ ಡೆಹರಾಡೂನ್‌ಗೆ ಯಾತ್ರಿಗಳನ್ನು ಕೊಂಡೊಯ್ಯುತ್ತಿತ್ತು.
ನವದೆಹಲಿ: ಉತ್ತರಾಖಂಡದ ಬದರೀನಾಥ್ನಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಘಟನೆಯಲ್ಲಿ ಹೆಲಿಕಾಪ್ಟರ್ನ ಎಂಜಿನಿಯರ್’ವೊಬ್ಬರು ಸಾವನ್ನಪ್ಪಿದ್ದಾರೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ ಮುಂಬೈನ ಕ್ಯಾಸಲ್ ಏವಿಯೇಷನ್ ಕಂಪನಿಯದಾಗಿದ್ದು ಬದರೀನಾಥ್ನಿಂದ ಡೆಹರಾಡೂನ್ಗೆ ಯಾತ್ರಿಗಳನ್ನು ಕೊಂಡೊಯ್ಯುತ್ತಿತ್ತು.
ಘಟನೆಯಲ್ಲಿ ಟೇಕ್ ಆಫ್ ಆದ ಕೆಲ ಹೊತ್ತಲೇ ಹೆಲಿಕಾಪ್ಟರ್ ಪತನಗೊಂಡಿದೆ. ಎಂಜಿನಿಯರ್ ಮೃತಪಟ್ಟಿದ್ದು ಇತರ ಐವರು ಸುರಕ್ಷಿತವಾಗಿದ್ದಾರೆ. ಪೈಲಟ್’ಗೆ ಗಾಯಗಳಾಗಿವೆ.
ಸುರಕ್ಷತಾ ಬೆಲ್ಟ್ ತುಂಡಾದ ಕಾರಣ ಎಂಜಿನಿಯರ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
(ಚಿತ್ರ: ಏಎನ್’ಐ)
