ಭಾರೀ ವಾಹನಗಳ ಸಂಚಾರಕ್ಕೆ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ ಘಾಟ್ ರಸ್ತೆಯಲ್ಲಿ  ನಿಷೇಧ ಹೇರಲಾಗಿದೆ. ಆದರೆ ಕಾರು ಮತ್ತು ಬೈಕ್ ಗಳ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸಾರಿಗೆ ಸಚಿವಾಲಯ ಹೇಳಿದೆ.

ಪೋಂಡಾ (ಗೋವಾ): ಬೆಳಗಾವಿ ಮತ್ತು ಗೋವಾಕ್ಕೆ ಸಂಪರ್ಕ ಕಲ್ಪಿಸುವ ಕರ್ನಾಟಕದ ಅನಮೋಡ್ ಘಾಟ್ ಮಾರ್ಗದ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳ ಮೇಲೆ ಮಾತ್ರವೇ ನಿರ್ಬಂಧ ಹೇರಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರು ಮತ್ತು ಬೈಕ್ ಗಳ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸಾರಿಗೆ ಸಚಿವಾಲಯ ಹೇಳಿದೆ. ಕರ್ನಾಟಕ ಮತ್ತು ಗೋವಾಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ಬಳಕೆಗೆ ದುರಸ್ತಿಯಾಗುವವರೆಗೂ ಈ ಮಾರ್ಗದಲ್ಲೇ ಕಾರು, ಬೈಕ್ ಸೇರಿದಂತೆ ಇತರ ಸಣ್ಣ ಪ್ರಮಾಣದ ವಾಹನಗಳ ಸಂಚಾರಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಮ್ಮತಿ ನೀಡಿದ್ದಾರೆ. 

ಅಗಲೀಕರಣ ಕಾಮಗಾರಿ ಕಾರಣ, ಗೋವಾದಿಂದ ಕರ್ನಾಟಕದ ಅನಮೋಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಇತ್ತೀಚೆಗೆ ಸಂಪೂರ್ಣ ಬಂದ್ ಆಗಿತ್ತು. ಇದಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.