Asianet Suvarna News Asianet Suvarna News

ದಸರಾ ರಜೆ ಮುಕ್ತಾಯ: ಎಲ್ಲೆಡೆ ಜಾಮ್ ಜಾಮ್ ಟ್ರಾಫಿಕ್ ಜಾಮ್..!

ದಸರಾ ರಜೆ ಮುಕ್ತಾಯವಾದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್  ಸಮಸ್ಯೆ ಉಂಟಾಗಿದೆ. ಎಲ್ಲೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ.

Heavy Traffic Jams Across Bengaluru As Dasara Holidays Over
Author
Bengaluru, First Published Oct 21, 2018, 8:58 PM IST

ಬೆಂಗಳೂರು, [ಅ.21]: ಸಾಲು-ಸಾಲು ರಜೆ ಹಾಗೂ ಮಳೆ ಸುರಿದರೆ ಸಾಕು ಬೆಂಗಳೂರಿನಲ್ಲಿ ಒಂದೇ ರಗಳೆ ಅದು ಟ್ರಾಫಿಕ್ ಜಾಮ್. 

ನಾಲ್ಕೈದು ದಿನ ಸಾಲು ಸಾಲು ರಜೆ ಇದ್ದರೆ ಸಾಕು ಬೆಂಗಳೂರಿನಿಂದ ಹೊರ ಹೋಗುವುದು ಒಂದು ದೊಡ್ಡ ಸಮಸ್ಯೆ. ಇನ್ನು ರಜೆ ಮುಗಿದ ಬಳಿಕವೂ ಸಹ ವಾಪಸ್ ಬೆಂಗಳೂರಿಗೆ ಎಂಟ್ರಿಯಾಗಬೇಕಾದ್ರೂ ಬಹುದೊಡ್ಡ ಸಮಸ್ಯೆ.

ಹೌದು, ಅಂತಹದ್ದೇ ಸಮಸ್ಯೆ ಈಗ ಜನರಿಗೆ ಎದುರಾಗಿದೆ. ದಸರಾ ಸಂಭ್ರಮವನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

ದಸರಾ ಹಬ್ಬ ಆಚರಿಸಲು ಸ್ವಗ್ರಾಮಕ್ಕೆ ತೆರಳಿದ್ದವರು ವಾಪಸ್ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಲಕ್ಷಾಂತರ ವಾಹನಗಳು ಒಮ್ಮೆಲೆ ಬೆಂಗಳೂರಿಗೆ ಆಗಮನವಾಗಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸ್ಲೋ ಮೂವಿಂಗ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ನೆಲಮಂಗಲದ ನವಯುಗ, ಜಾಸ್, ಲ್ಯಾಂಕೋ ಟೋಲ್‌, ಕುಣಿಗಲ್ ಬೈಪಾಸ್ ಬಳಿ ಸ್ಲೋ ಮೂವಿಂಗ್ ಟ್ರಾಫಿಕ್ ಉಂಟಾಗಿದೆ. ಮತ್ತೊಂದೆಡೆ  ಬಸ್‌ಗಳ ಕೊರತೆ ಇರುವುದರಿಂದ ಸಿಕ್ಕ ಬಸ್ ನ ಟಾಪ್ ಏರಿ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.

ಇದ್ರಿಂದ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಆಗಿದ್ದು, ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹಾಗೂ ಟೋಲ್ ಸಿಬ್ಬಂದಿ ಹರಸಾಹಸ ಪರದಾಡುತ್ತಿದ್ದಾರೆ. ಮುಖ್ಯವಾಗಿ ನಾಳೆ ಸೋಮವಾರವಾಗಿದ್ದರಿಂದ ಕಚೇರಿ ಹೋಗುತ್ತಾರೆ. ಹೀಗಾಗಿ ನಾಳೆ ಬೆಳ್ಳಗ್ಗೆಯೂ ಟ್ರಾಫಿಕ್ ಸಮಸ್ಯೆಯಾಗುವ ಸಾಧ್ಯತೆಗಳಿವೆ.

Follow Us:
Download App:
  • android
  • ios