Asianet Suvarna News Asianet Suvarna News

ಬೆಂಗಳೂರಿನಲ್ಲಿ ಶುರುವಾದ ಹಾವುಗಳ ಕಾಟ: ಪಾಲಿಕೆಗೆ ನಿತ್ಯ 30 ದೂರು

ಜತೆಗೆ ಮುನಿರೆಡ್ಡಿ ಪಾಳ್ಯದಲ್ಲಿ ಹಾವು ಕಚ್ಚಿ ಐದು ವರ್ಷದ ಬಾಲಕಿ ಮೃತಪಟ್ಟಿದ್ದಳು. ಇಂತಹ ಸಾಲು-ಸಾಲು ಘಟನೆಗಳು ನಡೆಯುತ್ತಿದ್ದರೂ ಬಿಬಿಎಂಪಿ ಅರಣ್ಯವಿಭಾಗದಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಸಿಬ್ಬಂದಿ ನೇಮಕ ಮಾಡಲು ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಸಾರ್ವಜನಿಕರು ಹಾವು ಹಿಡಿಯಲು ದೂರವಾಣಿ ಕರೆ ಮಾಡಿ ದರೂ ದಿನಗಟ್ಟಲೇ ಕಾದರೂ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Heavy Snakes at Bangalore

ಬೆಂಗಳೂರು(ಜೂ.26): ನಗರದಲ್ಲಿ ಮಳೆ ಹೆಚ್ಚಾಗಿ ಬೆಚ್ಚನೆ ಪ್ರದೇಶ ಹುಡುಕಿಕೊಂಡು ಹಾವುಗಳು ಶಾಲೆ, ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಪ್ರತಿ ದಿನ 30ಕ್ಕೂ ಹೆಚ್ಚು ಹಾವುಗಳ ಕಾಟ ಕುರಿತಂತೆ ಪಾಲಿಕೆಗೆ ದೂರು ಬರುತ್ತಿದ್ದರೂ ಇರುವ ಅಲ್ಪ ಸಿಬ್ಬಂದಿಯಿಂದ ಪರಿಹಾರ ಸಿಗುತ್ತಿಲ್ಲ. ಬ್ಯಾಟರಾಯನಪುರ ಶಾಲೆಯಲ್ಲಿ ಕಳೆದ ವಾರ 12 ನಾಗರಹಾವುಗಳ ರಾಶಿಯೇ ಕಾಣಿಸಿ ಕೊಂಡು ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದರು. 
ಜತೆಗೆ ಮುನಿರೆಡ್ಡಿ ಪಾಳ್ಯದಲ್ಲಿ ಹಾವು ಕಚ್ಚಿ ಐದು ವರ್ಷದ ಬಾಲಕಿ ಮೃತಪಟ್ಟಿದ್ದಳು. ಇಂತಹ ಸಾಲು-ಸಾಲು ಘಟನೆಗಳು ನಡೆಯುತ್ತಿದ್ದರೂ ಬಿಬಿಎಂಪಿ ಅರಣ್ಯವಿಭಾಗದಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಸಿಬ್ಬಂದಿ ನೇಮಕ ಮಾಡಲು ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಸಾರ್ವಜನಿಕರು ಹಾವು ಹಿಡಿಯಲು ದೂರವಾಣಿ ಕರೆ ಮಾಡಿ ದರೂ ದಿನಗಟ್ಟಲೇ ಕಾದರೂ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
198 ವಾರ್ಡ್‌ಗಳಿಗೆ ಆರು ಸಿಬ್ಬಂದಿ!: ಬಿಬಿಎಂಪಿಯ ಅರಣ್ಯ ವಿಭಾಗದಲ್ಲಿ 34 ವನ್ಯಜೀವಿ ಸಂರಕ್ಷಣಾ ಸ್ವಯಂ ಸೇವಕರ ಹುದ್ದೆ ಇವೆ. ಆದರೆ, ಸ್ವಯಂ ಸೇವಕರು ಸಾರ್ವಜ ನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 28 ಮಂದಿಯನ್ನು ಸೇವೆಯಿಂದ ವಾಪಸ್‌ ಕಳುಹಿಸಲಾಗಿದೆ. ಇದಾಗಿ ಹಲವು ತಿಂಗಳು ಕಳೆದರೂ ಹೊಸಬರ ನೇಮಕ ಮಾಡಿಲ್ಲ. ಕೇವಲ ಆರು ಮಂದಿ 198 ವಾರ್ಡ್‌ಗಳ ಸಾರ್ವಜನಿಕರ ಅಹವಾಲಿಗೂ ಸ್ಪಂದಿಸಲು ಆಗುತ್ತಿಲ್ಲ.

ಹಾವು ಹಿಡಿಯಲು ಬಿಬಿಎಂಪಿ ಬಳಿ ಇರೋದು 6 ಮಂದಿ ಮಾತ್ರ!

ಕಡತ ಚಿತ್ರ ಕಳೆದ ಒಂದು ತಿಂಗಳಿಂದ ಹಾವುಗಳ ಬಗೆಗಿನ ದೂರುಗಳು ಹೆಚ್ಚಾಗುತ್ತಿವೆ. ಬಿಬಿಎಂಪಿ ನಿಯಂತ್ರಣ ಕೊಠಡಿಗೆ ನಿತ್ಯ30ಕ್ಕೂ ಹೆಚ್ಚು ಹಾವು ಕಾಣಿಸಿಕೊಂಡಿರುವ ದೂರುಗಳು ಬರುತ್ತಿವೆ. ಪಾಲಿಕೆಯಲ್ಲಿ 6 ಮಂದಿ ಸಿಬ್ಬಂದಿ ಮಾತ್ರವೇ ಇರುವ ಕಾರಣ ಸೂಕ್ತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೇ ನಗರದ ಬ್ಯಾಟರಾಯನಪುರ ಸರ್ಕಾರಿ ಶಾಲೆಗೆ ನಿತ್ಯ ಹಾವುಗಳು ನುಗ್ಗುತ್ತಿರುವುದರಿಂದ ಶಾಲೆಯಲ್ಲಿ ಭಯದ ವಾತಾವರಣ ಉಂಟಾಗಿದೆ ಎಂದು ಎರಡು ವಾರದ ಹಿಂದೆಯೇ ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಸ್ವತಃ ಮೇಯರ್‌ ಅವರಿಗೆ ದೂರು ನೀಡಿದ್ದರು. ಆದರೆ, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಈವರೆಗೂ ಶಾಲೆಯಲ್ಲಿ ಹಾವುಗಳನ್ನು ಹಿಡಿದಿಲ್ಲ. ಉರಗ ತಜ್ಞರೊಬ್ಬರು ಶಾಲೆಯಲ್ಲಿ ಒಂದೇ ದಿನ 8 ನಾಗರ ಹಾವುಗಳು ಹಿಡಿದಿದ್ದಾರೆ. ಹೀಗಿದ್ದರೂ ಬಿಬಿಎಂಪಿಯವರು ಸ್ಪಂದಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿತ್ಯ ಭಯದ ವಾತಾವರಣದಲ್ಲೇ ಕಲಿಯುವಂತಾಗಿತ್ತು. ಈಗಲಾದರೂ ತ್ವರಿತವಾಗಿ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಎಂಬ ಕೂಗು ಸಾರ್ವಜನಿಕರಿಂದ ವ್ಯಕ್ತವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಉದ್ಯಾನ ನಗರಿಯಲ್ಲಿ ಹಾವುಗಳ ಕಾಟ ಎಲ್ಲ ಕಡೆ ಹೆಚ್ಚಾಗುತ್ತಿದೆ, 198 ವಾರ್ಡ್‌ಗಳಿರುವ ಬಿಬಿಎಂಪಿಯಲ್ಲಿ ಹಾವು ಹಿಡಿಯುವ ಸಿಬ್ಬಂದಿ ಮಾತ್ರ ಕೇವಲ ಆರು ಜನ ಮಾತ್ರ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios