ಚಿಕ್ಕಮಗಳೂರು (ಜು. 10):  ಮಲೆನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ 3 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.  

ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕಳಸ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾಗಿರುವುದರಿಂದ ರಾತ್ರಿ ಕಳಸ- ಹೊರನಾಡು ಸಂಪರ್ಕ ಕಡಿತವಾಗಿತ್ತು. ನೀರಿನ ಪ್ರಮಾಣ ತಗ್ಗುವವರೆಗೂ ಪ್ರವಾಸಿಗರು ಕಾದಿದ್ದಾರೆ.