ಮುಂಬೈ [ಜು.3]: ಮುಂಗಾರಿನ ಕೊರತೆ ಎದುರಿಸುತ್ತಿದ್ದ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಭಾನುವಾರದಿಂದೀಚೆಗೆ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ಥಗೊಳಿಸಿದೆ. ಜೊತೆಗೆ ಭಾರೀ ಮಳೆ ಮತ್ತು ಮಳೆ ಸಂಬಂಧಿ ಘಟನೆಗಳಿಗೆ ಮುಂಬೈನಲ್ಲಿ 25, ಪುಣೆಯಲ್ಲಿ 6 ಸೇರಿದಂತೆ ಮಹಾರಾಷ್ಟ್ರದಲ್ಲಿ ಒಟ್ಟು 35 ಜನ ಬಲಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಮುಂಬೈನಲ್ಲಿ 375 ಮಿ.ಮೀನಷ್ಟುಭಾರೀ ಮಳೆ ಸುರಿದಿದೆ. ಇದು 2005ರಲ್ಲಿ ಮುಂಬೈ ನಗರಿಯನ್ನು ಮುಳುಗಿಸಿದ್ದ ಮಹಾಮಳೆ ಮತ್ತು ಪ್ರವಾಹದ ಬಳಿಕ ಮಹಾನಗರಿಯಲ್ಲಿ ಸುರಿದ ಭಾರೀ ಪ್ರಮಾಣದ ಮಳೆಯಾಗಿದೆ. 

ಇನ್ನೂ 2 ದಿನ ಭಾರೀ ಮಳೆ?

ಮುಂದಿನ 48 ಗಂಟೆಗಳ ಅವಧಿಯಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.