ಸುಮಾರು 12 ಗಂಟೆಗಳ ಕಾಲ ರಾತ್ರಿಯಿಂದ ಬೆಳಗಿನಜಾವದವರೆಗೂ ನಡುಗಡ್ಡೆಯಲ್ಲಿ ನಿಂತು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.
ಹಾವೇರಿ(ಅ.04): ತಡರಾತ್ರಿ ಸುರಿದ ಭಾರೀ ಮಳೆಯಿಂದ ಕೆರೆಯ ಕೋಡಿ ಓಡೆದು ಹಳ್ಳಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಆಟೋಚಾಲಕನೊರ್ವ ಆಟೋ ಸಮೇತ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
28 ವರ್ಷದ ಗಂಗಾಧರ ಆರೇಮಲ್ಲಾಪುರ ಹಳ್ಳದಲ್ಲಿ ಸಿಲುಕಿದ ವ್ಯಕ್ತಿ. ಪ್ರಯಾಣಿಕರನ್ನ ಬಿಟ್ಟು ಅಜ್ಜಿ ಮನೆಗೆ ಹೋಗುವಾಗ ಈ ಅವಘಡ ಸಂಭವಿಸಿದೆ. ಸುಮಾರು 12 ಗಂಟೆಗಳ ಕಾಲ ರಾತ್ರಿಯಿಂದ ಬೆಳಗಿನಜಾವದವರೆಗೂ ನಡುಗಡ್ಡೆಯಲ್ಲಿ ನಿಂತು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.
ನಂತರ ಬೆಳಗಿನ ಸಮಯದಲ್ಲಿ ಹಳ್ಳದ ಕಡೆಗೆ ಹೋದ ಸ್ಥಳಿಯರು ಗಂಗಾಧರನನ್ನು ಕಂಡ ಈತನನ್ನ ರಕ್ಷಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಗಂಗಾಧರನನ್ನು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
