Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಆರ್ಭಟ: ಹಲವೆಡೆ ಧರೆಗುರುಳಿದ ಬೃಹತ್ ಮರಗಳು

ಬೆಂಗಳೂರಿನಲ್ಲಿ ರಾತ್ರಿ ಸುರಿದ ಗುಡುಗು-ಮಿಂಚು ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಮೆಜೆಸ್ಟಿಕ್​, ಶಿವಾನಂದ ಸರ್ಕಲ್​, ಕಾರ್ಪೋರೇಷನ್​, ಕೋರಮಂಗಲ, ಜಯನಗರ, ಜೆ.ಪಿ.ನಗರ, ಹೆಬ್ಬಾಳ, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ರೋಹಿಣಿ ಅಬ್ಬರಿಸಿದ್ದಾಳೆ.

Heavy Rain In Bangalore
  • Facebook
  • Twitter
  • Whatsapp

ಬೆಂಗಳೂರು(ಮೇ.27): ಬೆಂಗಳೂರಿನಲ್ಲಿ ರಾತ್ರಿ ಸುರಿದ ಗುಡುಗು-ಮಿಂಚು ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಮೆಜೆಸ್ಟಿಕ್​, ಶಿವಾನಂದ ಸರ್ಕಲ್​, ಕಾರ್ಪೋರೇಷನ್​, ಕೋರಮಂಗಲ, ಜಯನಗರ, ಜೆ.ಪಿ.ನಗರ, ಹೆಬ್ಬಾಳ, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ರೋಹಿಣಿ ಅಬ್ಬರಿಸಿದ್ದಾಳೆ.

ಇನ್ನು ರಾತ್ರಿ ಸುರಿದ ಭಾರೀ ಮಳೆಗೆ ನಗರದಲ್ಲಿ 11ಕ್ಕೂ ಹೆಚ್ಚು  ಮರಗಳು ಧರೆಗುರುಳಿವೆ. ಹೆಬ್ಬಾಳ, ಶಾಂತಿನಗರ, ಡಬಲ್​ರೋಡ್​, ಸಂಜಯ್​ನಗರ, ಕೋರಮಂಗಲ, ಕಾರ್ಪೋರೇಷನ್​, ಪುಲಿಕೇಶಿ ನಗರ, ಬಿಟಿಎಂ ಲೇಔಟ್​ ಸೇರಿದಂತೆ  ಹಲವಡೆ ಮರಗಳು ನೆಲಕ್ಕುರುಳಿವೆ. ಇತ್ತ ಶಿವಾನಂದ ಸರ್ಕಲ್ ಬಳಿಯ ರೈಲ್ವೆ ಬ್ರಿಡ್ಜ್​ ಕೆಳಗಡೆ ನೀರಿನಲ್ಲಿ ಕಾರು ಮುಳುಗಿದೆ. ಶೇಷಾದ್ರಿಪುರಂನ ಮನೆಯೊಂದಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಇತ್ತ ಹೆಬ್ಬಾಳ, ಕಸ್ತೂರಿ ಬಾ ರಸ್ತೆ ಸೇರಿದಂತೆ ಹಲವಡೆ ವಿದ್ಯುತ್​ ಕಂಬ ಬಿದ್ದು ವಿದ್ಯುತ್​ ಪೂರೈಕೆ ಸ್ಥಗಿತಗೊಂಡಿತ್ತು. ಹಲವಡೆ  ವಾಹನಗಳ ಮೇಲೆ ಮರಗಳು ಬಿದ್ದು ವಾಹನಗಳು ಜಖಂಗೊಂಡಿದೆ. ಇತ್ತ ಬಿಬಿಎಂಪಿ ಸಹಾಯವಾಣಿ ಆರಂಭಿಸಿದ್ದು, ಮೇಯರ್ ಜಿ.ಪದ್ಮಾವತಿಯವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಧಾರಾಕಾರ ಮಳೆ ಹಿನ್ನೆಲೆ ಜಯನಗರ, ಹಳೆ ಏರ್​ಪೋರ್ಟ್​ ರಸ್ತೆ, ಮಡಿವಾಳ, ಶಾಂತಿನಗರ, ಶಿವಾನಂದ, ಕಾರ್ಪೋರೇಷನ್​ ಸೇರಿದಂತೆ ಹಲವೆಡೆ ಸುಮಾರು 2 ಗಂಟೆಗೂ ಹೆಚ್ಚು ಟ್ರಾಫಿಕ್​ ಜಾಮ್​ ಆಗಿದ್ದು ಸವಾರರಿಗೆ ತೀವ್ರ ತೊಂದರೆಯಾಗಿತ್ತು. ಒಟ್ನಲ್ಲಿ ಮೊದಲಿಗೆ ಬ್ರೇಕ್ ಕೊಟ್ಟು ಆಮೇಲೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಗಾರ್ಡನ್ ಸಿಟಿ ಜನರಿಗೆ ಒಂದು ಕಡೆ ಖುಷಿ ಮತ್ತೊಂದು ಕಡೆ ಸಂಕಷ್ಟವೂ ಎದುರಾಗಿದೆ.

Follow Us:
Download App:
  • android
  • ios