ರಾಜಧಾನಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರವಾಗಿ ಸುರಿದ ಕಂಭದ್ರೋಣ ಮಳೆಯಿಂದಾಗಿ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ಶಿವಾನಂದ್ ಸರ್ಕಲ್ ರೈಲ್ವೆ ಬ್ರಿಡ್ಜ್ ಬಳಿ ನೀರಿನಲ್ಲಿ ಓರ್ವ ಯುವಕ ಕೊಚ್ಚಿ ಹೋಗಿದ್ದು ನಾಲ್ಕು ಗಂಟೆ ಕಾರ್ಯಾಚರಣೆ ಬಳಿಕ ಯುವಕ ಅರುಣ್'ನ ಮೃತದೇಹ ಪತ್ತೆಯಾಗಿದೆ.
ಬೆಂಗಳೂರು (ಸೆ.09): ರಾಜಧಾನಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರವಾಗಿ ಸುರಿದ ಕಂಭದ್ರೋಣ ಮಳೆಯಿಂದಾಗಿ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ಶಿವಾನಂದ್ ಸರ್ಕಲ್ ರೈಲ್ವೆ ಬ್ರಿಡ್ಜ್ ಬಳಿ ನೀರಿನಲ್ಲಿ ಓರ್ವ ಯುವಕ ಕೊಚ್ಚಿ ಹೋಗಿದ್ದು ನಾಲ್ಕು ಗಂಟೆ ಕಾರ್ಯಾಚರಣೆ ಬಳಿಕ ಯುವಕ ಅರುಣ್'ನ ಮೃತದೇಹ ಪತ್ತೆಯಾಗಿದೆ.
ಎನ್‌ಡಿಆರ್‌ಎಫ್ ಸಿಬ್ಬಂದಿ ಸತತ ಕಾರ್ಯಾಚರಣೆಯಿಂದ ಕಿನೋ ಥಿಯೋಟರ್ ಬಳಿ ಅರುಣ್ ಮೃತ ದೇಹ ಪತ್ತೆಯಾಗಿದೆ. 18 ವರ್ಷದ ಅರುಣ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಅರುಣ್ ಕುಟುಂಬಕ್ಕೆ ಕೆ.ಜೆ.ಜಾರ್ಜ್ 5 ಲಕ್ಷ ರೂ ಪರಿಹಾರವನ್ನು ಘೋಷಿಸಿದ್ದಾರೆ.
ಶಾಲಾ ಕಟ್ಟಡ ಕುಸಿತ
ನಗರ್ತ್‌ರಪೇಟೆಯಲ್ಲಿರುವ ಶ್ರೀ ಹುಕ್ಕಿಚಂದ್ ಖಿಂಚಾ ಬಾಲನಿಕೇತನ್ ಶಾಲೆ ಕಟ್ಟಡ ಕುಸಿದಿದೆ.
ಧರೆಗಿಳಿದ ಮರಗಳು
ಒಂದೇ ಸಮನೆ ಸುರಿದ ಧಾರಾಕಾರ ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಆರ್ ವಿ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ಮರಗಳು ಧರೆಗೆ ಉರುಳಿವೆ. 20 ಮೀಟರ್ ಅಂತರಕ್ಕೆ ಒಂದೊಂದು ಮರ ಧರೆಗೆ ಉರುಳಿವೆ. ಕಾರಿನ ಮೇಲೆ ಮರ ಬಿದ್ದು ಕಾರು ನಜ್ಜು ಗುಜ್ಜಾಗಿದೆ. ಆರ್'ವಿ ರಸ್ತೆಯಲ್ಲಿ ಸಂಚಾರ ನಿರ್ಬಂಧವಾಗಿದೆ. ಒಟ್ಟು 47 ಮರಗಳು ಉರುಳಿ ಬಿದ್ದಿವೆ. ಶ್ರೀನಗರದಲ್ಲಿ 12, ಶಾಂತಿನಗರದಲ್ಲಿ 3, ಜಯನಗರದಲ್ಲಿ 5, ಹನುಮಂತನಗರದಲ್ಲಿ 4, ಚಾಮರಾಜಪೇಟೆಯಲ್ಲಿ 8, ಜೆ.ಪಿ.ನಗರದಲ್ಲಿ 3, ಮಿನರ್ವ ವೃತ್ತದಲ್ಲಿ ನೀಲಗಿರಿ ಮರಗಳು ಧರೆಗುರುಳಿವೆ.
