ನೆರೆ ಉಂಟಾದ ಪ್ರದೇಶಕ್ಕೆ ಅಂಕೋಲಾ ತಹಶೀಲ್ದಾರ ಭೇಟಿ ನೀಡಿ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ.

ಕಾರವಾರ (ಅ.11): ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಕೆಲವು ಗ್ರಾಮಗಳು ಜಲಾವೃತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಕೋಲಾ ತಾಲೂಕಿನ ಕೇಣಿ, ಕೇಣಿಯ ಗಾಂವಕರವಾಡಾ, ಬಡಗೇರಿ ಗ್ರಾಮದ 15ಕ್ಕೂ ಹೆಚ್ಚು ಮನೆಗಳಿಗೆ ನೀರು ಆವರಿಸಿಕೊಂಡಿದೆ.

ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಕೇಣಿ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ನೆರೆ ಉಂಟಾದ ಪ್ರದೇಶಕ್ಕೆ ಅಂಕೋಲಾ ತಹಶೀಲ್ದಾರ ಭೇಟಿ ನೀಡಿ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ.

ಮಳೆ ನಿಂತಿದಿದ್ದರೂ ನೀರಿನ ಪ್ರಮಾಣ ಇಳಿದಿಲ್ಲ. ಮಳೆ ಮತ್ತೆ ಬಂದಲ್ಲಿ ಇಡೀ ಗ್ರಾಮ ಜಲಾವೃತವಾಗುವ ಸಾಧ್ಯತೆ ಇದೆ. ನೆರೆಯಿಂದ ತೊಂದರೆಗೊಳಗಾದ ಜನರಿಗೆ ಗಂಜಿಕೇಂದ್ರ ತೆರೆಯಲು ಕಂದಾಯ ಅಧಿಕಾರಿಗಳು ಮುಂದಾಗಿದ್ದಾರೆ.