ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಅಬ್ಬರಿಸಲಿದ್ದಾನೆ ವರುಣ

Heavy rain Appear Next 24 in State
Highlights

ಕಳೆದ ವಾರ ರಾಜ್ಯದಲ್ಲಿ ಆರ್ಭಟಿಸಿದ್ದ ಮಳೆಯು ಕ್ಷೀಣಿಸಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮತ್ತೆ ಬಿರುಸು ಪಡೆದುಕೊಂಡಿದೆ. 

ಬೆಂಗಳೂರು: ಕಳೆದ ವಾರ ರಾಜ್ಯದಲ್ಲಿ ಆರ್ಭಟಿಸಿದ್ದ ಮಳೆಯು ಕ್ಷೀಣಿಸಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮತ್ತೆ ಬಿರುಸು ಪಡೆದುಕೊಂಡಿದೆ. 

ಭಾರಿ ಅನಾಹುತ ಸೃಷ್ಟಿಸಿದ್ದ ಮಳೆರಾಯ ಮತ್ತೆ ಅಬ್ಬರದಿಂದ ಸುರಿಯಲು ಸಜ್ಜಾಗಿದ್ದಾನೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದಿ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರ.

ಕರಾವಳಿ ವ್ಯಾಪ್ತಿಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ವ್ಯಾಪ್ತಿಯಲ್ಲಿ ಬಿಡುವು ನೀಡಿದೆ. ಈ ವ್ಯಾಪ್ತಿಯಲ್ಲಿ ಸೋಮವಾರ ಬಿಸಿಲಿನ ವಾತಾವರಣ ಇತ್ತಾದರೂ, ಕೆಲವೆಡೆ ಬಿಡುವು ನೀಡಿ ಮಳೆಯಾಗಿದೆ. ಆದರೆ ಇದೀಗ ಮತ್ತೆ ಭಾರೀ ಮಳೆಯಾಗಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. 

loader