ನಾಪತ್ತೆಯಾಗಿರುವ ಎಲ್ಲ ಸ್ಥಳಗಳಿಗೂ ಅಗ್ನಿ ಶಾಮಕ ದಳ ಹಾಗೂ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ.

ಬೆಂಗಳೂರು(ಅ.13): ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು, ಸಂಜೆ ಸುರಿದ ಭಾರಿ ಮಳೆಯಿಂದಾಗಿ 7 ಮಂದಿ ಮೃತಪಟ್ಟಿದ್ದಾರೆ.

ಕುರುಬರಹಳ್ಳಿಯ 18ನೇ ಕ್ರಾಸ್ ಬಳಿ ಮನೆ ಗೋಡೆ ಕುಸಿದು ದಂಪತಿ ಮೃತಪಟ್ಟಿದ್ದಾರೆ. ಕಮಲಮ್ಮ ಶಂಕರಪ್ಪ ಮೃತರು. ಲಗ್ಗೆರೆಯ ಕೆಂಪೇಗೌಡ ಬಡಾವಣೆಯಲ್ಲಿ ತಾಯಿ ಮೀನಾಕ್ಷಿ(57), ಮಗಳು ಪುಷ್ಪಾ(22) ನಾಪತ್ತೆಯಾಗಿದ್ದಾರೆ. ಬಸವೇಶ್ವರನಗರದ ಚರಂಡಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾಗಿರುವ ಎಲ್ಲ ಸ್ಥಳಗಳಿಗೂ ಅಗ್ನಿ ಶಾಮಕ ದಳ ಹಾಗೂ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ.ಮೆಜೆಸ್ಟಿಕ್, ಓಕಳಿಪುರ, ಶಿವಾನಂದ ವೃತ್ತ, ಕೋರಮಂಗಲ, ವಿಜಯನಗರ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.