ಹೊಸ ವರ್ಷದ ಆಗಮನಕ್ಕೆ ಚಳಿಯೂ ರಂಗೇರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿಯ ಪ್ರಮಾಣ ಕೂಡ ತೀವ್ರಗೊಂಡಿದ್ದು, ರಾಜಧಾನಿಯಲ್ಲಿ ಕಳೆದ 17 ವರ್ಷಗಳ ಬಳಿಕ ಭಾರಿ ಚಳಿಯ ವಾತಾವರಣ ಈ ಬಾರಿ ಕಂಡುಬಂದಿದೆ.
ಬೆಂಗಳೂರು (ಡಿ.31): ಹೊಸ ವರ್ಷದ ಆಗಮನಕ್ಕೆ ಚಳಿಯೂ ರಂಗೇರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿಯ ಪ್ರಮಾಣ ಕೂಡ ತೀವ್ರಗೊಂಡಿದ್ದು, ರಾಜಧಾನಿಯಲ್ಲಿ ಕಳೆದ 17 ವರ್ಷಗಳ ಬಳಿಕ ಭಾರಿ ಚಳಿಯ ವಾತಾವರಣ ಈ ಬಾರಿ ಕಂಡುಬಂದಿದೆ.
ಅಲ್ಲದೆ, ರಾಜ್ಯಾದ್ಯಂತ ಇದೇ ಸ್ಥಿತಿ ಮುಂದುವರೆದಿದ್ದು, ಕಳೆದ ವಾರ ವಿಜಯಪುರದಲ್ಲಿ 9 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶ ದಾಖಲಾಗಿದೆ. ಇದು ಡಿಸೆಂಬರ್ ತಿಂಗಳಿನಲ್ಲಿ ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಸಾರ್ವಕಾಲಿಕ ದಾಖಲೆ. 2002ರಲ್ಲಿ 11.8 ಡಿಗ್ರಿಯಷ್ಟು ಕಡಿಮೆ ಉಷ್ಣಾಂಶ ದಾಖಲಾಗಿದ್ದ ವಿಜಯಪುರದಲ್ಲಿ ಡಿ.22ರಂದು ಕೇವಲ 9 ಡಿಗ್ರಿ ದಾಖಲಾಗಿತ್ತು.
ಇದೇ ಸ್ಥಿತಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕಂಡುಬರುತ್ತಿದ್ದು, 13ರಿಂದ 16 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಡಿ.22ರಂದು ಬಾಗಲಕೋಟೆಯಲ್ಲಿ ಕೂಡ 9 ಡಿಗ್ರಿಗೆ ಉಷ್ಣಾಂಶ ಕುಸಿದಿತ್ತು. 1918ರಲ್ಲಿ ಬೀದರ್ ಜಿಲ್ಲೆಯಲ್ಲಿ 2.8 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಕರ್ನಾಟಕದ ಸಾರ್ವಕಾಲಿಕ ದಾಖಲೆಯ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
