ಜಮ್ಮು ಮತ್ತು ಕಾಶ್ಮೀರದ ಆರ್'ಎಸ್ ಪುರದ ಮೇಲೆ ಪಾಕಿಸ್ತಾನದ ಯೋಧರು ಕದನ ವಿರಾಮ ಉಲ್ಲಂಘನೆ ಮಾಡಿದ ಪರಿಣಾಮ ಸೇನೆ ಪ್ರತಿಯಾಗಿ ದಾಳಿ ನಡೆಸಿದೆ.
ಜಮ್ಮು(ಅ.29): ಭಾರತೀಯ ಸೇನಾ ಪಡೆ ಗಡಿ ನಿಯಂತ್ರಣ ರೇಖೆಯ ಕೇರನ್ ವಿಭಾಗದಲ್ಲಿ ಪಾಕ್'ನ ನಾಲ್ಕು ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದು ಪಾಕ್'ನ ಹಲವು ಮಂದಿ ಯೋಧರು ಮೃತಪಟ್ಟಿರುವ ಸಾಧ್ಯತೆಯಿದೆ. ಇದನ್ನು ಭಾರತೀಯ ಸೇನೆಯೇ ಸ್ಪಷ್ಟಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಆರ್'ಎಸ್ ಪುರದ ಮೇಲೆ ಪಾಕಿಸ್ತಾನದ ಯೋಧರು ಕದನ ವಿರಾಮ ಉಲ್ಲಂಘನೆ ಮಾಡಿದ ಪರಿಣಾಮ ಸೇನೆ ಪ್ರತಿಯಾಗಿ ದಾಳಿ ನಡೆಸಿದೆ.
ಕಳೆದ ಶುಕ್ರವಾರ ಭಾರತೀಯ ಪಡೆ ಕದನ ವಿರಾಮವನ್ನು ಉಲ್ಲಂಘಿಸಿದ ಪರಿಣಾಮ 15 ಪಾಕ್ ಯೋದರನ್ನು ಕೊಂದಿತ್ತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಇಂದು ' ಭಾರತೀಯ ಸೇನೆ ಅಪ್ರಚೋದಕ ದಾಳಿಗೆ ತಕ್ಕ ಉತ್ತರ ನೀಡುತ್ತದೆ ಪಾಕ್'ಗೆ ಖಡಕ್ ಎಚ್ಚರಿಕೆ ನೀಡಿದ್ದರು.