ಪಾಟ್ನಾ[ಆ.01]: ಮನೆಯಲ್ಲಿ ಆಟವಾಡುತ್ತಿದ್ದ 3 ವರ್ಷದ ಬಾಲಕಿ 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಚಮತ್ಕಾರದ ರೀತಿಯಲ್ಲಿ ಬದುಕಿ ಬಂದಿದ್ದಾಳೆ. 

ಬಿಹಾರದ ಮುಂಗೇರ್ ಎಂಬಲ್ಲಿ 35 ಅಡಿ ಆಳದಲ್ಲಿ ಬಾಲಕಿದ್ದ ಬಾಲಕಿಯನ್ನ ಸತತ  29 ಗಂಟೆಗಳ ಕಾರ್ಯಾಚರಣೆ ಮೂಲಕ ಮೇಲೆತ್ತಲಾಗಿದೆ. ನಿನ್ನೆ ಮಧ್ಯಾಹ್ನ ಸನ್ನೋ ಎಂಬ ಬಾಲಕಿ ಅಜ್ಜಿ ಮನೆಗೆ ತೆರಳಿ ಆಟವಾಡುತ್ತಿದ್ದ ವೇಳೆ ಅಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಳು. 

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಜನರ ಪ್ರಾರ್ಥನೆ,ಪೊಲೀಸರು, ಅಗ್ನಿಶಾಮಕ ದಳದ ಸತತ ಪರಿಶ್ರಮದಿಂದ ಬಾಲಕಿಯನ್ನು ಜೀವಂತವಾಗಿ ಹೊರ ತೆಗೆಯಲಾಗಿದೆ. ಬಾಲಕಿಗೆ ಆಹಾರ ಪೊಟ್ಟಣ, ಆಮ್ಲಜನಕ ರವಾನಿಸಲಾಗಿತ್ತು.