ಕೇಂದ್ರ ಆರೋಗ್ಯ ಸಚಿವಾಲಯ ಎಚ್‌ಐವಿ ಮತ್ತು ಏಡ್ಸ್‌ ಕಾಯ್ದೆಯ ಜಾರಿಯ ಗೆಜೆಟ್‌ ಸುತ್ತೋಲೆ ಪ್ರಕಟಿಸಿದೆ. ಇದರಿಂದ ಎಚ್‌ಐವಿ, ಏಡ್ಸ್‌ ಪೀಡಿತರಿಗೂ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಉದ್ಯೋಗಗಳಲ್ಲಿ ಸಮಾನ ಹಕ್ಕು ದೊರೆಯಲಿದೆ.

ನವದೆಹಲಿ: ಎಚ್‌ಐವಿ, ಏಡ್ಸ್‌ ಪೀಡಿತರಿಗೂ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಉದ್ಯೋಗಗಳಲ್ಲಿ ಸಮಾನ ಹಕ್ಕುಗಳನ್ನು ಒದಗಿಸುವ ಕಾನೂನು ಅಧಿಕೃತವಾಗಿ ಜಾರಿಗೆ ಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಈ ಕುರಿತ ಎಚ್‌ಐವಿ ಮತ್ತು ಏಡ್ಸ್‌ ಕಾಯ್ದೆಯ ಜಾರಿಯ ಗೆಜೆಟ್‌ ಸುತ್ತೋಲೆ ಪ್ರಕಟಿಸಿದೆ. ಏ.20ರಂದು ಕಾಯ್ದೆಗೆ ರಾಷ್ಟ್ರಪತಿಯವರ ಅನುಮೋದನೆ ಸಿಕ್ಕಿತ್ತು.

ಏಡ್ಸ್‌ ಪೀಡಿತರಿಗೆ ಆರೋಗ್ಯ ಸೇವೆ, ಉದ್ಯೋಗ, ಮನೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಣೆ ಮಾಡುವುದನ್ನು ಈ ಕಾಯ್ದೆಯಲ್ಲಿ ನಿಷೇಧಿಸಲಾಗಿದೆ.