ದಿನ ಬೆಳಗಾದರೆ ಪ್ಯಾಲೇಸ್​ ಗ್ರೌಂಡ್​ನಲ್ಲಿ ಅಸಹ್ಯ ಎನ್ನುವಷ್ಟು ನಡೆಯುತ್ತಲ್ಲ ಅದೆಲ್ಲ ಐಟಿ ಇಲಾಖೆಯವರ ಕಣ್ಣಿಗೆ ಕಾಣಲ್ವಾ? ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಯ್ಕೆ ಮಾಡಿ ಮಾಡಿ ದಾಳಿ ಮಾಡಿದರೆ ಐಟಿ ಇಲಾಖೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತೆ

ಬೆಂಗಳೂರು(ಆ.05): ಇಲ್ಲಿಯವರೆಗೂ ಮಾಡದ ಐಟಿ ದಾಳಿ ಈಗೇಕೆ? ಇದು ದ್ವೇಷದ ರಾಜಕೀಯ ದಾಳಿ ಅನ್ನೋದು ನೋಡಿದರೆ ಗೊತ್ತಾಗಲ್ಲವೇ? ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಯ ಹಿನ್ನಲೆಯಲ್ಲಿ ಹೀಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಚಿವ ರಮೇಶ್​ಕುಮಾರ್​.

ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು​, ದಿನ ಬೆಳಗಾದರೆ ಪ್ಯಾಲೇಸ್​ ಗ್ರೌಂಡ್​ನಲ್ಲಿ ಅಸಹ್ಯ ಎನ್ನುವಷ್ಟು ನಡೆಯುತ್ತಲ್ಲ ಅದೆಲ್ಲ ಐಟಿ ಇಲಾಖೆಯವರ ಕಣ್ಣಿಗೆ ಕಾಣಲ್ವಾ? ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಯ್ಕೆ ಮಾಡಿ ಮಾಡಿ ದಾಳಿ ಮಾಡಿದರೆ ಐಟಿ ಇಲಾಖೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್​ ಆದದ್ದಕ್ಕೆ ಇವೆಲ್ಲವನ್ನೂ ತಡೆಕೊಂಡಿದ್ದಾರೆ, ಅವರು ಈ ಸವಾಲು ಎದುರಿಸಿ ಹೊರಬರ್ತಾರೆ, ಆದರೆ ನಮ್ಮಂತವರ ಮೇಲಾದರೆ ನಮ್ಮ ಕತೆ ಮುಗಿದೇ ಹೋಯ್ತು ಅಂತಾಗುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಐಟಿ ಇಲಾಖೆಯ ಹೀಗೆ ನಿರ್ದಿಷ್ಟ ದಾಳಿಗಳ ಮಾಡುವುದರಿಂದ ಜನಮಾನಸದಲ್ಲಿ ತನ್ನ ವಿಶ್ವಾಸ ನಂಬಿಕೆ ಕಳೆದುಕೊಳ್ಳುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.