ಬೆಂಗಳೂರು (ಡಿ.06): ಯಾವನ್ರಿ ಅವ್ನು ಜೆ ಇ? ನಾನು ಹೇಳೋದನ್ನ ಕೇಳೋದು ಬಿಟ್ಟು ಅವನ ಮಾತು ಕೇಳ್ತೀರಾ? ಎಂದು ಅಧಿಕಾರಿ ವಿರುದ್ಧ ಆರೋಗ್ಯ ಸಚಿವ ರಮೇಶ್ ಕುಮಾರ್ ದರ್ಪ ತೋರಿಸಿದ್ದಾರೆ.

ಬೆಂಗಳೂರು (ಡಿ.06): ಯಾವನ್ರಿ ಅವ್ನು ಜೆ ಇ? ನಾನು ಹೇಳೋದನ್ನ ಕೇಳೋದು ಬಿಟ್ಟು ಅವನ ಮಾತು ಕೇಳ್ತೀರಾ? ಎಂದು ಅಧಿಕಾರಿ ವಿರುದ್ಧ ಆರೋಗ್ಯ ಸಚಿವ ರಮೇಶ್ ಕುಮಾರ್ ದರ್ಪ ತೋರಿಸಿದ್ದಾರೆ.

ಜ್ಯೂನಿಯರ್ ಎಂಜಿನೀಯರ್ ಮೇಲೆ ನೀರಿನ ಬಾಟಲ್ ಎತ್ತಿ ಆರ್ಭಟಿಸಿದ್ದಾರೆ. ಅಧಿಕಾರಿಗಳ ವಿರುದ್ಧ ರಾಸ್ಕಲ್, ಯೂಸ್'ಲೆಸ್ ಎಂದು ಹರಿಹಾಯ್ದಿದ್ದಾರೆ. ಅಧಿಕಾರಿಗಳು ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಮಾಡುತ್ತಾರೆಂದು ಬೆಂಬಲಿಗರು ಆರೋಪಿಸಿದ್ದರು. ಈ ಆರೋಪ ಕೇಳಿ ಕೋಲಾರದ ಸುಗುಟೂರು ಗ್ರಾಮದಲ್ಲಿ ರಮೇಶ್ ಕುಮಾರ್ ಗರಂ ಆಗಿದ್ದಾರೆ. ಜೂನಿಯರ್ ಎಂಜಿನೀಯರ್ ವೆಂಕಟೇಶ್ ಮೇಲೆ ಹರಿಹಾಯ್ದಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರು ಇದ್ದಾರೆ ಎಂದು ಬೆಂಬಲಿಗರು ಸಚಿವರನ್ನು ಸಮಾಧಾನಪಡಿಸಿದ್ದಾರೆ.