ವಿಜಯಪುರ[ಆ.30]: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತ್ರಸ್ತರು ವಿಷ ಸೇವಿಸಬೇಕು ಎಂದು ಹೇಳುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆಕಾರಿ ಹೇಳಿಕೆ ನೀಡಿದ್ದು ತಪ್ಪು. ಹೆಬ್ಬಾಳ್ಕರ್ ಅವರೇ ಮೊದಲು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಖಾರ ವಾಗಿ ಪ್ರತಿಕ್ರಿಯಿಸಿದ್ದಾರೆ.

ಜಾರಕಿಹೊಳಿ ಕ್ಷೇತ್ರದಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್!

ಗುರುವಾರ ಸಂಜೆ ವಿಜಯಪುರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಆತ್ಮಹತ್ಯೆ ಹೆಬ್ಬಾಳ್ಕರ್‌ರ ಮನೆಯಿಂದಲೇ ಆರಂಭವಾಗಲಿ. ಮೊದಲು ಹೆಬ್ಬಾಳ್ಕರ್ ಅವರೇ ಆತ್ಮಹತ್ಯೆ ಮಾಡಿಕೊಳ್ಳಲಿ. ಹೆಬ್ಬಾಳ್ಕರ್ ಅವರು ಸದಾ ಪ್ರಚಾರದಲ್ಲಿ ಇರಬೇಕು ಎನ್ನುವವರು. ಅವರಿಗೆ ಸಂಸ್ಕಾರ ಇಲ್ಲ. ಹೀಗಾಗಿ ಆತ್ಮಹತ್ಯೆ, ಭಿಕ್ಷೆ ಎತ್ತುವ ಹೇಳಿಕೆ ನೀಡಿ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು