ಶಶಿಕಲಾ ಪತಿಗೆ ತೀವ್ರ ಅನಾರೋಗ್ಯ : ಪೆರೋಲ್’ಗೆ ಅರ್ಜಿ ಸಲ್ಲಿಸುವ ಸಾಧ್ಯತೆ

First Published 19, Mar 2018, 10:42 AM IST
Health condition of Sasikalas Husband Natarajan worsens
Highlights

ಜೈಲಿನಲ್ಲಿರುವ ಶಶಿಕಲಾ ಪತಿಗೆ ತೀವ್ರ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಶಶಿಕಲಾ ಪೆರೋಲ್’ಗೆ ಅರ್ಜಿ ಹಾಕುವ ಸಾಧ್ಯತೆ ಹೆಚ್ಚಿದೆ.

ಆನೇಕಲ್ : ಜೈಲಿನಲ್ಲಿರುವ ಶಶಿಕಲಾ ಪತಿಗೆ ತೀವ್ರ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಶಶಿಕಲಾ ಪೆರೋಲ್’ಗೆ ಅರ್ಜಿ ಹಾಕುವ ಸಾಧ್ಯತೆ ಹೆಚ್ಚಿದೆ. ಗಂಡನ ಅನಾರೋಗ್ಯ ಹಿನ್ನೆಲೆಯಲ್ಲಿ  ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇಂದು ತಮಿಳುನಾಡಿನ ವಕೀಲರು ಕೇಂದ್ರ ಕಾರಾಗೃಹಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ.

ಶಶಿಕಲಾ ಪತಿ ನಟರಾಜನ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ನಟರಾಜನ್ ಸ್ಥಿತಿ ಇದೀಗ ಗಂಭೀರವಾಗಿದೆ.

ಈ ನಿಟ್ಟಿನಲ್ಲಿ ಶಶಿಕಲಾ ಪೆರೋಲ್’ಗೆ ಅರ್ಜಿ ಹಾಕುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಈ ಬಗ್ಗೆ  ಪ್ರತಿಕ್ರಿಯೆ ನೀಡರುವ  ಕೇಂದ್ರ ಕಾರಾಗೃಹ ಇಲಾಖೆ ಅಧೀಕ್ಷರಾದ ಸೋಮಶೇಖರ್ ಅವರು ಇದುವರೆಗೂ ಯಾವುದೇ  ಪತ್ರ ಬಂದಿಲ್ಲ ಎಂದು ಹೇಳಿದ್ದಾರೆ.

loader