ದೇಶದ ಭದ್ರ ಬುನಾದಿಯ ಭವಿಷ್ಯದ ವಿದ್ಯಾರ್ಥಿಗಳಿಗೆ ಬಾಲ್ಯದ ಶಿಕ್ಷಣ ಬಹುಮುಖ್ಯ. ಆದರೆ ಇಲ್ಲೊಬ್ಬ ಮುಖ್ಯಶಿಕ್ಷಕರು ಪದೇ ಪದೇ ಗೈರಾಗೋ ಮೂಲಕ ಮಕ್ಕಳನ್ನ ವಂಚಿಸುತ್ತಿದ್ದಾರೆ. ಅಲ್ಲದೇ, ಶಾಸಕರು, ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿದ್ದಾನೆ. ಅಷ್ಟಕ್ಕೂ ಈ ಹೆಡ್ ಮಾಸ್ಟರ್ ಯಾರು ಅಂತೀರಾ? ಇಲ್ಲಿದೆ ನೋಡಿ ವಿವರ.

ಚಿಕ್ಕಬಳ್ಳಾಪುರ (ಮಾ.08): ದೇಶದ ಭದ್ರ ಬುನಾದಿಯ ಭವಿಷ್ಯದ ವಿದ್ಯಾರ್ಥಿಗಳಿಗೆ ಬಾಲ್ಯದ ಶಿಕ್ಷಣ ಬಹುಮುಖ್ಯ. ಆದರೆ ಇಲ್ಲೊಬ್ಬ ಮುಖ್ಯಶಿಕ್ಷಕರು ಪದೇ ಪದೇ ಗೈರಾಗೋ ಮೂಲಕ ಮಕ್ಕಳನ್ನ ವಂಚಿಸುತ್ತಿದ್ದಾರೆ. ಅಲ್ಲದೇ, ಶಾಸಕರು, ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿದ್ದಾನೆ. ಅಷ್ಟಕ್ಕೂ ಈ ಹೆಡ್ ಮಾಸ್ಟರ್ ಯಾರು ಅಂತೀರಾ? ಇಲ್ಲಿದೆ ನೋಡಿ ವಿವರ.

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕು ತಿರುಮಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರವಿ ಸಮಾಜ ವಿಜ್ಞಾನ ಬೋಧಿಸುತ್ತಾರೆ. ಪದೇ ಪದೇ ಸ್ಕೂಲಿಗೆ ಗೈರಾಗುವ ೀತನಿಂದಾಗಿ ವಿದ್ಯಾರ್ಥಿಗಳು ಹೈರಾಣಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಹೆಡ್​​ಮಾಸ್ಟರ್​ ರವಿ ಗೈರಿಂದಾಗಿ ಆತಂಕಕ್ಕೆ ಒಳಗಾದ ಪೋಷಕರು ಶಾಸಕ ಎಸ್ಎನ್.ಸುಬ್ಬಾರೆಡ್ಡಿ ಅವರಿಗೆ ದೂರು ನೀಡಿದ್ದಾರೆ. ಶಾಲೆಗೆ ಬಂದು ಪರಿಶೀಲಿಸಿದ, ಶಾಕಸರು ಗುಡಿಬಂಡೆ BEOಗೆ ಕ್ರಮಕ್ಕೆ ಸೂಚಿಸಿ ಹಾಜರಾತಿ ಪುಸ್ತಕದಲ್ಲಿ ಗೈರಾದ ದಿನಗಳಲ್ಲಿ ಗೈರು​ ಹಾಕಿಸಿದ್ದಾರೆ. ಆದರೆ, ಖತರ್ನಾಕ್ ಕೆಲಸ ಮಾಡಿದ ಹೆಡ್ ಮಾಸ್ಟರ್ ರವಿ ವೈಟ್ ನರ್ ಹಾಕಿ ಪ್ರೆಸೆಂಟ್ ಹಾಕಿ ಶಾಸಕರು ಹಾಗೂ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಪರೀಕ್ಷೆ ಹತ್ತಿರವಾಗುತ್ತಿದೆ. ವಿದ್ಯಾರ್ಥಿ, ಪೋಷಕರ ಜೊತೆ ಚೆಲ್ಲಾಟವಾಡುತ್ತಾ, ಎಲ್ಲರಿಗೂ ತಲೆನೋವಾಗಿರುವ ರವಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಶಿಕ್ಷಕನನ್ನು ಕೇಳಿದರೆ ಹೇಳುವುದೇ ಬೇರೆ. ನಾನು ಆನ್ ಡೂಟಿಯಲ್ಲಿ ಬೇರೆ ಕಚೇರಿಗಳತ್ತ ಹೊರಗಡೆ ಹೋಗಿದ್ದಾಗ ಆಬ್ಸೆಂಟ್ ಹಾಕಿದ್ದಾರೆ. ಹೀಗಾಗಿ ನಾನು ಮತ್ತೆ ಅದನ್ನು ತಿದ್ದಿ ಪ್ರಸೆಂಟ್ ಹಾಕಿದ್ದೇನೆ ಎಂದಿದ್ದಾರೆ.

ಒಟ್ನಲ್ಲಿ ಭವಿಷ್ಯದ ಪ್ರಜೆಗಳ ಜೊತೆ ಚೆಲ್ಲಾಟವಾಡುತ್ತಿರುವ ರವಿ ಮಾಸ್ಟರ್ ಧಿಮಾಕಿಗೆ ಕಡಿವಾಣ ಹಾಕಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕೋ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಿದೆ