ತನ್ನ ನಟನಾ ಚಾತುರ್ಯದಿಂದ ತಮಿಳುನಾಡು ಸೇರಿದಂತೆ ಜಗತ್ತಿನಾದ್ಯಂತ ಫೇಮಸ್ ಆಗಿರೋ ನಟ. ಅಂದ್ಹಾಗೆ ಆ ನಟ ತಮಿಳಿನ ಆರಾಧ್ಯ ದೈವ ರಜನಿಕಾಂತ್ ಅಲ್ಲ, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅಂತೂ ಅಲ್ಲವೇ ಅಲ್ಲ.
ಚೆನ್ನೈ(ಅ.6): ಜಯಲಲಿತಾ ತಮಿಳುನಾಡಿನ ಜನ ಬೆಳಗಾಗೆದ್ದು ಪೂಜಿಸೋ ಅಮ್ಮ ಎಂದರೆ ತಪ್ಪಾಗಲಾರದು. ಜನರಿಗಾಗಿ, ಜನರಿಗೋಸ್ಕರ ಏನು ಕೆಲಸ ಮಾಡಲು ಪ್ರಾಣ ಕೊಡಲು ಅಮ್ಮ ರೆಡಿಯಾಗಿದ್ದಾರೆ. ಇದಕ್ಕೆ ಅಮ್ಮ ಜಾರಿಗೊಳಿಸಿರುವ ಯೋಜನೆಗಳೇ ಸಾಕ್ಷಿ.
ಜಯಲಲಿತಾ ಅವರು ಜನರನ್ನು ಓಟ್ ಬ್ಯಾಂಕ್ಗಳ ಥರ ಯಾವತ್ತೂ ನೋಡಿಲ್ಲ. ಸ್ವಂತ ತನ್ನ ಮಕ್ಕಳಂತೆ ನೋಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಜಯಲಲಿತಾ ಈ ಜನರ ಪಾಲಿಗೆ ಅಮ್ಮನಾಗಿದ್ದಾರೆ. ತಮಿಳುನಾಡಲ್ಲಿ ಯಾರನ್ನಾದ್ರೂ ಕೇಳಿ. ಜಯಲಲಿತಾರನ್ನ ಹೆಸರು ಹಿಡಿದು ಯಾರೂ ಕರಿಯೋದಿಲ್ಲ. ಅಮ್ಮಾ ಅಂತಾನೇ ಕರೀತಾರೆ. ಅಮ್ಮಾ ಅಂತನೇ ಖ್ಯಾತಿ ಗಳಿಸಿದ್ದಾರೆ.
ಜನರಿಗಾಗಿ ಎಲ್ಲ ಯೋಜನೆಗಳು
ಜಯಲಲಿತಾ ಮೊಟ್ಟ ಮೊದಲ ಬಾರಿಗೆ ತಮಿಳುನಾಡಿನ ಸಿಎಂ ಆಗಿದ್ದು 1991ರಲ್ಲಿ. ಅಂದಿನಿಂದ ಅವರು ಜನರೇ ದೇವರೆಂದು ಕೊಂಡು ಬಂದರು. ಜನರ ಸಂಕಷ್ಟಗಳಿಗೆ ಮರುಗಿ ಹಸಿದು ಮಲಗ್ತಿದ್ದವರಿಗೆ ಅಮ್ಮಾ ಕ್ಯಾಂಟೀನ್ ಮೂಲಕ ಊಟ ಕೊಟ್ರು. ಬಡವರಿಗೆ ಕುಡಿಯೋದಕ್ಕೆ ಅಮ್ಮಾ ವಾಟರ್ ಕೊಟ್ರು. ಬಡವರಿಗೆ ಕಡಿಮೆ ದರದಲ್ಲಿ ಔಷಧಿ ಕೊಟ್ರು. ಓದೋ ಮಕ್ಕಳಿಗೆ ಲ್ಯಾಪ್ಟಾಪ್ ಕೊಟ್ರು. ಹೀಗೆ ತಮ್ಮ ಜನರಿಗೆ ಏನೆಲ್ಲಾ ಬೇಕೋ, ಅದೆಲ್ಲವನ್ನೂ ಕೊಡ್ತಾ ಬಂದ್ರು.
ಅಮ್ಮನ ವಾರಸುದಾರ ಯಾರು ಗೊತ್ತೆ ?
ಜಯಲಲಿತಾ ನಾಯಕತ್ವದ ಬಗ್ಗೆ ದೂಸ್ರಾ ಮಾತಾಡೋಹಾಗಿಲ್ಲ. ಆದರೆ ಜಯಲಲಿತಾ ನಂತರ, ತಮಿಳುನಾಡನ್ನು ಆಳೋದು ಯಾರು? ತಮಿಳುನಾಡಿನ ಮುಂದಿನ ಸಿಎಂ ಯಾರು? ಜಯಲಲಿತಾರ ಮುಂದಿನ ಉತ್ತರಾಧಿಕಾರಿ ಯಾರು? ಈ ಪ್ರಶ್ನೆ ಇಡೀ ತಮಿಳುನಾಡನ್ನ ಕಾಡ್ತಾ ಇದೆ. ಆದರೆ ಕೆಲವು ಮೂಲಗಳ ಪ್ರಕಾರ, ಜಯಲಲಿತಾ ನಂತರ, ತಮಿಳುನಾಡಿನ ಸಿಎಂ ಆಗೋದು ಓರ್ವ ನಟ. ತನ್ನ ನಟನಾ ಚಾತುರ್ಯದಿಂದ ತಮಿಳುನಾಡು ಸೇರಿದಂತೆ ಜಗತ್ತಿನಾದ್ಯಂತ ಫೇಮಸ್ ಆಗಿರೋ ನಟ. ಅಂದ್ಹಾಗೆ ಆ ನಟ ತಮಿಳಿನ ಆರಾಧ್ಯ ದೈವ ರಜನಿಕಾಂತ್ ಅಲ್ಲ, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅಂತೂ ಅಲ್ಲವೇ ಅಲ್ಲ.
ಮತ್ತಿನ್ಯಾರು ಅವರೇ ತಲಾ ?
ಜನಸಾಮಾನ್ಯರೊಂದಿಗೆ ಬೆರತು ಬಡವರೊಂದಿಗೆ ಇರಲು ಇಷ್ಟಪಡುವ ನಟ ಅಜಿತ್. ಇವರು ಬದುಕಿನಲ್ಲೂ ಸರಳ ಹೆಚ್ಚು ಆಡಂಬರವಿಲ್ಲದ ನಟ. ಬರೀ ತಮಿಳುನಾಡು ಮಾತ್ರ ಅಲ್ಲ. ಇಡೀ ಜಗತ್ತಿನಲ್ಲೇ ಮಿಂಚಿನ ಸಂಚಲನ ಮೂಡಿಸಿದ ನಟ. ಮಲೇಷಿಯಾ, ಶ್ರೀಲಂಕಾ, ಇಂಡೋನೇಷ್ಯಾ ಹೀಗೆ ನಾನಾ ದೇಶಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿರೋ ನಟ ಇವರು.
ನಟ ಅಜಿತ್ ಅವರು ಸಿನಿ ರಸಿಕರಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದು ಇದೇ ಅಜಿತ್. ಇವರು ತಮಿಳುನಾಡಿನ ಮುಂದಿನ ಸಿಎಂ ಆಗೋದು ಅಂತಾ ಇಡೀ ತಮಿಳುನಾಡೇ ಹೇಳ್ತಾ ಇದೆ. ತಲಾ ಅಜಿತ್ ಮುಂದಿನ ಸಿಎಂ ಆಗ್ತಾರೆ. ಆಗ್ಲೇ ಬೇಕು ಅನ್ನೋದು, ತಮಿಳುನಾಡಿನ ಜನರ ಖಡಕ್ ಮಾತು. ಅಷ್ಟಕ್ಕೂ ತಮಿಳುನಾಡಿನ ಜನ ಯಾಕಿಷ್ಟು ಖಡಕ್ ಆಗಿ ಅಜಿತ್ ಹೆಸರು ಹೇಳ್ತಿದ್ದಾರೆ ಗೊತ್ತಾ? ಅಜಿತ್ ತಮಿಳುನಾಡಿನ ಮುಂದಿನ ಸಿಎಂ ಆಗ್ಬೇಕು ಅನ್ನೋದು ಖುದ್ದು ಜಯಲಲಿತಾ ಅವರ ಆಸೆಯಂತೆ.
ವಿಲ್ನಲ್ಲಿ ಇದೆಯಂತೆ ತಲಾ ಹೆಸರು?
ತನ್ನ ನಂತರ, ಯಾರು ತನ್ನ ಉತ್ತರಾಧಿಕಾರಿ ಆಗ್ಬೇಕು ಅನ್ನೋದನ್ನ, ತಮಿಳುನಾಡಿನ ಅಮ್ಮ, ಈಗಾಗಲೇ ವಿಲ್ ಬರೆದಿಟ್ಟಿದ್ದಾರಂತೆ. ಆ ವಿಲ್ನಲ್ಲಿ ಇರೋ ವ್ಯಕ್ತಿನೇ ತಮಿಳುನಾಡಿನ ಮುಂದಿನ ಸಿಎಂ ಆಗ್ಬೇಕಂತೆ. ಆತಾನೇ ಜಯಲಲಿತಾರ ಸಂಪೂರ್ಣ ಜವಾಬ್ದಾರಿಗಳನ್ನ ಮುಂದೆ ಹೊತ್ಕೋಬೇಕಂತೆ. ಇಡೀ ತಮಿಳುನಾಡಿನ ಜನರ ಸಂಕಷ್ಟಗಳನ್ನ ನಿವಾರಿಸಬೇಕಂತೆ. ಅಷ್ಟಕ್ಕೂ ಆ ವಿಲ್ನಲ್ಲಿ ಇರೋದು ಯಾರ ಹೆಸರು ಅಂತ ಕೆದಕುತ್ತಾ ಹೋದಾಗ ಗೊತ್ತಾಯ್ತು, ಅಮನ್ಮ ವಿಲ್ನಲ್ಲಿ ಬರೆದಿಟ್ಟ ಹೆಸರು ತಲಾ ಅಜಿತ್ ಅವರದು ಅಂತ.
ತಮಿಳುನಾಡಿನ ಜನರ ನಂಬಿಕೆ ಗಳಿಸಿದ ನಟ
ಅಜಿತ್ ತಮಿಳುನಾಡಿನ ಜನರ ನಂಬಿಕೆ ಗಳಿಸಿದ್ದಾರೆ. ಬರೀ ಹೀರೋ ಆಗಿ ಮಾತ್ರವಲ್ಲ. ಸಮಾಜಮುಖಿ ಕೆಲಸಗಳಿಂದಲೂ ಗುರ್ತಿಸಿಕೊಂಡಿದ್ದಾರೆ. ಸಹಾಯ ಮಾಡೋ ಗುಣ ಇದೆ. ಬಡವರ ಬಗ್ಗೆ ಮಿಡಿಯೋ ಮನಸ್ಸಿದೆ. ಜನರನ್ನು ಸೆಳೆಯುವ ಆಕರ್ಷಣೆ ಇದೆ. ಹೀಗಾಗಿ ಅಜಿತ್ಗಿರೋ ಒಳ್ಳೇ ಮನಸ್ಸನ್ನು ನೋಡಿ, ತಮ್ಮ ಉತ್ತರಾಧಿಕಾರಿ ಅಂತ ವಿಲ್ ಬರೆಸಿರಬಹುದು ಜಯಲಲಿತಾ. ಇನ್ನು ಜಯಲಲಿತಾ ಪಕ್ಷದ ಮೇಲೆ ಅಜಿತ್ಗೆ ಒಲವಿದೆ. ವಯಕ್ತಿಕವಾಗಿ ಜಯಲಲಿತಾ ಆಡಳಿತ ಮತ್ತು ಜನಪರ ಯೋಜನೆಗಳ ಬಗ್ಗೆ ಅಜಿತ್ಗೆ ಮೆಚ್ಚುಗೆ ಇದೆ. ಈ ಎಲ್ಲಾ ಕಾರಣಗಳಿಂದ, ಅಜಿತ್ ಮುಂದಿನ ದಿನಗಳಲ್ಲಿ ಎಐಎಡಿಎಂಕೆ ಪಕ್ಷ ಸೇರಬಹುದು. ಅಮ್ಮನ ಉತ್ತರಾದಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಬಹುದು. ತಮಿಳುನಾಡಿಗೆ ಮುಂದಿನ ಸಿಎಂ ಆಗಬಹುದು ಅಂತ ಹೇಳಲಾಗ್ತಿದೆ.
ಎಲ್ಲರಿಗೂ ಅಚ್ಚರಿ
ಅಂದುಕೊಂಡಿರಲಿಲ್ಲ. ಅಜಿತ್ ಜಯಲಲಿತಾ ಉತ್ತರಾಧಿಕಾರಿಯಾಗ್ತಾರೆ ಅಂತ ಯಾರೂ ಊಹಿಸಿರಲಿಲ್ಲ.. ಕನಸು ಮನಸಿನಲ್ಲೂ ಅಜಿತ್ ಹೆಸರು ಬಂದಿರಲಿಲ್ಲ. ಆದ್ರೀಗ ವಿಲ್ನಲ್ಲಿ ಅಜಿತ್ ಹೆಸರು ಇರಬಹುದು ಅನ್ನೋ ಸುದ್ದಿ ತಮಿಳುನಾಡಿನಾದ್ಯಂತ ಓಡಾಡ್ತಿದೆ. ಈ ಸುದ್ದಿ ಕೇಳಿ, ಅಮ್ಮನ ಜೊತೆಗಿದ್ದ ಚಿಕ್ಕಮ್ಮ ಶಶಿಕಲಾ ಕೂಡ ಶಾಕ್ ಆಗಿದ್ದಾರೆ.
ಪನ್ನೀರ್ ಸೆಲ್ವಂ ಕೂಡ ಅಲ್ಲ
ಇನ್ನು ಜಯಲಲಿತಾ ಸಂಕಷ್ಟಗಳಲ್ಲಿ ಸಿಕ್ಕಾಕೊಂಡಿದ್ದಾಗ, 02 ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ರು ಓ ಪನೀರ್ ಸೆಲ್ವಂ. ನಂತರ ಜಯಲಲಿತಾ ಸಂಕಷ್ಟದಿಂದ ಹೊರ ಬಂದಾಗ, ಸಿಎಂ ಹುದ್ದೆಯನ್ನು ಅಮ್ಮನಿಗೆ ಬಿಟ್ಟು ಕೊಟ್ಟಿದ್ರು. ಜಯಲಲಿತಾ ನಂತರ, ಓ ಪನೀರ್ ಸೆಲ್ವಂ ಅಮ್ಮನ ಉತ್ತರಾಧಿಕಾರಿ ಆಗಬಹುದು. ಈತಾನೇ ತಮಿಳುನಾಡಿನ ಸಿಎಂ ಆಗಬಹುದು ಅಂತ, ಕೆಲವರು ಮಾತಾಡಿಕೊಳ್ತಿದ್ರು. ಆದರೆ ಎಲ್ಲವೂ ಉಲ್ಟಾ ಆದಂತಿದೆ. ಪನೀರ್ ಸೆಲ್ವಂ ನಿಷ್ಠಾವಂತ ನಿಜ. ಆದ್ರೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವಷ್ಟು ಸಮರ್ಥ ವ್ಯಕ್ತಿಯಲ್ಲ ಅಂತ ಪಕ್ಷದವರೇ ಮಾತನಾಡಿಕೊಳ್ತಿದ್ದಾರೆ.
ದತ್ತುಪುತ್ರನಿಗೂ ಅಧಿಕಾರವಿಲ್ಲ?
ಇನ್ನು ಸುಧಾಕರನ್ರನ್ನ ಜಯಲಲಿತಾ ದತ್ತುಪುತ್ರ ಅನ್ನೋದು ನಿಮ್ಮೆ ಗೊತ್ತೇ ಇದೆ. ಆದ್ರೆ ದತ್ತು ಪುತ್ರಾನೂ ಜಯಲಲಿತಾ ಉತ್ತರಾಧಿಕಾರಿಯಲ್ಲ ಅಂತ ಹೇಳಲಾಗ್ತಿದೆ. ಜಯಾ ಬರೆದಿರೋ ಸೀಕ್ರೆಟ್ ವಿಲ್ನಲ್ಲಿ, ಸುಧಾಕರನ್ ಹೆಸ್ರು ಇಲ್ಲ ಅಂತ ಹೇಳಲಾಗ್ತಿದೆ. ಹೀಗಾಗಿ, ಶಶಿಕಲ, ಪನೀರ್ ಸೆಲ್ವಂ, ಸುಧಾಕರನ್ ಇವರೆಲ್ಲರನ್ನೂ ಬಿಟ್ಟು, ಅಜಿತ್ ತಮ್ಮ ಉತ್ತರಾದಿಕಾರಿ ಅಂತ ಜಯಲಲಿತಾ ವಿಲ್ ಬರೆದಿದ್ದಾರಂತೆ.
ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್
ಸೂಚನೆ : ಜನರಾಡುವ ಕಲ್ಪಿತ ವರದಿಯ ಸುದ್ದಿಯಷ್ಟೆ. ವಾಸ್ತವಾಂಶವನ್ನು ಕುರಿತು ವರದಿ ಮಾಡಿಲ್ಲ.
