ಎಚ್‌ಡಿಕೆ ಪ್ರಮಾಣ ವಚನಕ್ಕೆ ಖರ್ಚಾದ ಹಣವೆಷ್ಟು..?

HDK swearing event cost 42.9 lakh
Highlights

ಇತ್ತೀಚಿಗೆ ಅದ್ಧೂರಿಯಾಗಿ ನಡೆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವೆಚ್ಚವಾಗಿರುವ ಹಣವೆಷ್ಟು ಎನ್ನುವ ಸಂಗತಿ ಈಗ ಬಯಲಾಗಿದೆ.

ಬೆಂಗಳೂರು :  ಇತ್ತೀಚಿಗೆ ಅದ್ಧೂರಿಯಾಗಿ ನಡೆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ .42.9 ಲಕ್ಷ ಲಕ್ಷ ವೆಚ್ಚವಾಗಿರುವ ಸಂಗತಿ ಈಗ ಬಯಲಾಗಿದೆ.

ಸಮಿಶ್ರ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಹಾಗೂ ಮೂರು ದಿನಗಳು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಮಾಣ ವಚನ ಸಮಾರಂಭ ಖರ್ಚು ವೆಚ್ಚದ ಕುರಿತು ಮಾಹಿತಿ ಕೋರಿ ಆರ್‌ಟಿಐ ಕಾರ್ಯಕರ್ತ ಕೆ.ನರಸಿಂಹಮೂರ್ತಿ ಅವರು ಕುಮಾರ ಕೃಪಾ ಅತಿಥಿ ಗೃಹದ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಕುಮಾರ ಕೃಪಾ ಅತಿಥಿ ಗೃಹದ ಅಧೀಕ್ಷಕಿ (ಪ್ರಭಾರ) ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ವಿ.ಪದ್ಮಾವತಿ ಅವರು ಉತ್ತರ ನೀಡಿದ್ದು, ಇದರಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಅಧಿಕಾರ ಚುಕ್ಕಾಣಿ ಹಿಡಿದ ಸಮಾರಂಭದ ಖರ್ಚು ವೆಚ್ಚದ ಕುರಿತು ವಿವರಣೆ ಕೊಟ್ಟಿದ್ದಾರೆ.

ಮೇ 17ರಂದು ರಾಜಭವನದಲ್ಲಿ ಸರಳವಾಗಿ ನಡೆದ ಯಡಿಯೂರಪ್ಪ ಅವರು ಪ್ರಮಾಣ ವಚನ ಸಮಾರಂಭಕ್ಕೆ ಚಹಾಕೂಟ ವ್ಯವಸ್ಥೆ ಸೇರಿದಂತೆ .15.93 ಲಕ್ಷ ವೆಚ್ಚವಾಗಿದೆ. ಶಿಷ್ಟಾಚಾರದ ಪ್ರಕಾರ ಹೂಗುಚ್ಚಕ್ಕಾಗಿ ಪ್ರತ್ಯೇಕವಾಗಿ .21 ಸಾವಿರ ಖರ್ಚಾಗಿದೆ. ಅದೇ ರೀತಿ ಮೇ 23ರಂದು ವಿಧಾನಸೌಧ ಮುಂಭಾಗ ವಿಜೃಂಭಣೆಯಿಂದ ನಡೆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ .42.89 ಲಕ್ಷ ವೆಚ್ಚವಾಗಿದೆ ಎಂದು ಕುಮಾರ ಕೃಪಾ ಅತಿಥಿ ಗೃಹದ ಅಧೀಕ್ಷಕರು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ರಾಷ್ಟ್ರ ಮಟ್ಟದ ರಾಜಕೀಯ ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ನಾನಾ ಗಣ್ಯರು ಆಗಮಿಸಿದ್ದರು.

loader