ನಾನು ಟೈಂ ಮೆಂಟೇನ್ ಮಾಡುವುದಿಲ್ಲ ಎಂಬ ಆರೋಪ ಇದೆ. ಒಪ್ಪುತ್ತೇನೆ, ಆದರೆ ಯಾರನ್ನೂ ನೋಯಿಸಲು ನನ್ನಿಂದಾಗದು. ಹಾಗಾಗಿ ನನ್ನ ಟೈಂ ಸೆನ್ಸ್ ಬಗ್ಗೆ ಅಪವಾದವಿದೆ. ಕರ್ನಾಟಕದ ಬಗ್ಗೆ ನಾನೊಂದು ಕನಸು ಕಂಡಿದ್ದೇನೆ

ಬೆಂಗಳೂರು(ಡಿ.15): ಸುವರ್ಣ ನ್ಯೂಸ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ 'ಜೆಡಿಎಸ್​ ಅಧಿಕಾರಕ್ಕೆ ಬಂದರೆ ನಂತರದ 24 ಗಂಟೆಯಲ್ಲೇ ರೈತರ 50 ಸಾವಿರ ಕೋಟಿ ಸಾಲ ಮನ್ನಾ ಮಾಡುವುದು ಶತಸಿದ್ಧ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಳ್ಳು ಹೇಳುತ್ತಿಲ್ಲ, ಭರವಸೆ ನೀಡುತ್ತಿಲ್ಲ, ಮಾಡಿ ತೋರಿಸುತ್ತೇನೆ. ಮನಸ್ಸಿದ್ದರೆ ಮಾರ್ಗವಿದೆ. ರೈತರಿಗಾಗಿ ಆ ಮಾರ್ಗ ಅನುಸರಿಸುವೆ. ನಾನು ಟೈಂ ಮೆಂಟೇನ್ ಮಾಡುವುದಿಲ್ಲ ಎಂಬ ಆರೋಪ ಇದೆ. ಒಪ್ಪುತ್ತೇನೆ, ಆದರೆ ಯಾರನ್ನೂ ನೋಯಿಸಲು ನನ್ನಿಂದಾಗದು. ಹಾಗಾಗಿ ನನ್ನ ಟೈಂ ಸೆನ್ಸ್ ಬಗ್ಗೆ ಅಪವಾದವಿದೆ. ಕರ್ನಾಟಕದ ಬಗ್ಗೆ ನಾನೊಂದು ಕನಸು ಕಂಡಿದ್ದೇನೆ. ಅತಂತ್ರ ವಿಧಾನಸಭೆಯಾದರೆ ನನ್ನ ಕನಸಿನ ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ. ಮತ್ತೊಬ್ಬರ ಬಳಿ ಗೋಗರೆಯುವ ಅವಕಾಶ ಕೊಡಬೇಡಿ. 113 ಮ್ಯಾಜಿಕ್ ನಂಬರ್ ಕೊಡಿ, ದೇಶವೇ ತಿರುಗಿ ನೋಡುವಂತೆ ಮಾಡುತ್ತೇನೆ' ಎಂದು ಮನವಿ ಹೇಳಿದರು.