.
ಬೆಂಗಳೂರು(ಡಿ.15): ಸುವರ್ಣ ನ್ಯೂಸ್ ವಿಶೇಷ ಸಂದರ್ಶನದ ರಾಜಕೀಯದ ಹಲವು ಏಳುಬೀಳುಗಳ ಬಗ್ಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕೊನೆಯಲ್ಲಿ ಮೋದಿ, ಬಿಎಸ್'ವೈ, ಡಿಕೆಶಿ,ಹೆಚ್'ಡಿಡಿ, ಅಮಿತ್ ಶಾ, ಪ್ರಜ್ವಲ್ ರೇವಣ್ಣ, ಹೆಚ್.ಡಿ. ದೇವಣ್ಣ ನಿಖಿಲ್,ಜಮೀರ್ ಅಹಮದ್ ಖಾನ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಒಂದು ಸಾಲಿನ ಉತ್ತರ ನೀಡಿದರು.
ನರೇಂದ್ರ ಮೋದಿ : ಮಹಾನ್ ಸಂಘಟನೆಕಾರ, ಮಾರ್ಕೆಟಿಂಗ್, ಸೇಲ್ಸ್ ಎಕ್ಸ್ ಪರ್ಟ್
ಬಿ.ಎಸ್.ಯಡಿಯೂರಪ್ಪ: ಕೆಲಸ ಮಾಡುತ್ತಾರೆ, ಹೋರಾಟ ಮಾಡುತ್ತಾರೆ
ಸಿದ್ದರಾಮಯ್ಯ : ಸ್ವಲ್ಪ ಸೋಮಾರಿ , ಸಿಎಂ ಆಗಿ ಸಿಕ್ಕಿರುವ ಅವಕಾಶ ಸೂಕ್ತ ಬಳಕೆ ಆಗಿಲ್ಲ
ಡಿ.ಕೆ.ಶಿವಕುಮಾರ್: ರಾಜಕೀಯದ ಜೊತೆಗೆ ಉತ್ತಮ ವ್ಯವಹಾರಸ್ಥ
ಎಚ್.ಡಿ.ದೇವೇಗೌಡರು: ಅತ್ಯಂತ ಶ್ರಮಜೀವಿ, ಛಲದಲ್ಲಿ ದೇವೇಗೌಡರಿಗಿಂತ ಇನ್ನೊಬ್ಬ ನಾಯಕರಿಲ್ಲ.
ನಿಖಿಲ್ ಕುಮಾರ್ : ಭವಿಷ್ಯದ ಉತ್ತಮ ಕಲಾವಿದ
ಪ್ರಜ್ವಲ್ ರೇವಣ್ಣ: ಭವಿಷ್ಯದಲ್ಲಿ ಕನಸು ಕಟ್ಟಿಕೊಂಡಿದ್ದಾರೆ
ಅಮಿತ್ ಶಾ: ಬಿಜೆಪಿ ಹಾಗೂ ಮೋದಿ ಜೊತೆಯಿರುವ ಚಾಣಕ್ಯ
ರಾಹುಲ್ ಗಾಂಧಿ: ಇಂದಿನ ರಾಜಕಾರಣದಲ್ಲಿ ಬಲಿಪಶು ವ್ಯಕ್ತಿ
ಸೋನಿಯಾ ಗಾಂಧಿ: ಅತ್ಯಂತ ಧೈರ್ಯವಂತ ನಾಯಕಿ,ಮಹಿಳೆಯಾಗಿ ಹಲವು ಕ್ಲಿಷ್ಟಕರ ಪರಿಸ್ಥಿತಿ ಎದುರಿಸಿದ್ದಾರೆ.
ಎಚ್.ಡಿ.ರೇವಣ್ಣ : ಒಬ್ಬ ಒಳ್ಳೆಯ ಕೆಲಸಗಾರ
ಜಮೀರ್ ಅಹ್ಮದ್ ಖಾನ್: ಏನನ್ನೂ ಹೇಳದಿರುವುದೇ ಸೂಕ್ತ
