ಪ್ರತಾಪ್ ಸಿಂಹ ಅವರು ಶಾ ನಿರ್ದೇಶನದ ಮೇಲೆ ಬ್ಯಾರಿಕೇಡ್ ಒಡೆದಿರಬೇಕು'
ಬೆಂಗಳೂರು(ಡಿ.04): ಹುಣುಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ತಿರುಗಿ ಬಿದ್ದಿವೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ‘ಸಂಸದ ಪ್ರತಾಪ್ ಸಿಂಹ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಬಂಧಿಸಬೇಕಿತ್ತು. ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೇಲೂ ಸಹ ಕೇಸ್ ಹಾಕಬೇಕು' ಎಂದು ಆಗ್ರಹಿಸದ ಅವರು ‘ಪ್ರತಾಪ್ ಸಿಂಹ ಅವರು ಶಾ ನಿರ್ದೇಶನದ ಮೇಲೆ ಬ್ಯಾರಿಕೇಡ್ ಒಡೆದಿರಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.
