ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲೇ ನಡೆಯಲಿದೆ ಈ ಕೆಲಸ..!

HDK Slams Congress Govt
Highlights

ಕೋಮು ಸಂಘರ್ಷ ಉಂಟು ಮಾಡುವವರು ಬಾಲ ಬಿಚ್ಚದಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನೋಡಿಕೊಳ್ಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಗ್ದಾನ ಮಾಡಿದ್ದಾರೆ.

ಬೆಂಗಳೂರು : ಕೋಮು ಸಂಘರ್ಷ ಉಂಟು ಮಾಡುವವರು ಬಾಲ ಬಿಚ್ಚದಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನೋಡಿಕೊಳ್ಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಗ್ದಾನ ಮಾಡಿದ್ದಾರೆ.

ಪುರಭವನದಲ್ಲಿ ಜೆಡಿಎಸ್‌ನ ಬೃಹತ್ ಸಮಾವೇಶ ಮತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುಘರ್ಷಣೆಯ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯವೈಖರಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯಾರಾದರೂ ಸತ್ತರೆ ‘ಬನ್ನಿ ಬೆಂಕಿ ಹಚ್ಚಿ’ ಎನ್ನುವ ಬಿಜೆಪಿಯವರು ಈ ರಾಜ್ಯವನ್ನು ಆಳಬೇಕೆ? ಇವರ ರಾಜಕೀಯಕ್ಕಾಗಿ ಉತ್ತಮವಾಗಿದ್ದ ಕರಾವಳಿ ಜಿಲ್ಲೆಯನ್ನೇ ಹಾಳು ಮಾಡಲು ಹೊರಟಿದ್ದಾರೆ.

ಇವರನ್ನು ಹದ್ದುಬಸ್ತಿನಲ್ಲಿಡುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಕೋಮು ದಳ್ಳುರಿಗೆ ಒಬ್ಬರು ಸೀಮೆಎಣ್ಣೆ ಸುರಿದರೆ, ಇನ್ನೊಬ್ಬರು ಬೆಂಕಿ ಹಚ್ಚುತ್ತಾರೆ. ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಇವರು ಹೇಗೆ ಬಾಲ ಬಿಚ್ಕೋತಾರೆ ನೋಡ್ತೀನಿ ಎಂದು ಸವಾಲು ಹಾಕಿದರು.

loader