ಮೊದಲು ಯಡಿಯೂರಪ್ಪ ಈ ಕೇಸನ್ನು ಜೀವಂತವಾಗಿ ಇಟ್ಟುಕೊಂಡಿದ್ದರು. ಈ ಪ್ರಕರಣದಲ್ಲಿ ಏನು ಬಂಡವಾಳ ಇಲ್ಲ. ಆದರೂ ಈಗ ಕಾಂಗ್ರೆಸ್ ಸರ್ಕಾರ ಇದನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ. 10 ವರ್ಷದ ಹಿಂದೆ ನಡೆದಿರೋದು ಈಗ ಜೀವಂತ ಆಗಿದೆ, ಎಂದು ಜಂತಕಲ್ ಪ್ರಕರಣದ ಬಗ್ಗೆ ಎಚ್’ಡಿಕೆ ಹೇಳಿದ್ದಾರೆ.

ಬೆಂಗಳೂರು: ಮೊದಲು ಯಡಿಯೂರಪ್ಪ ಈ ಕೇಸನ್ನು ಜೀವಂತವಾಗಿ ಇಟ್ಟುಕೊಂಡಿದ್ದರು. ಈ ಪ್ರಕರಣದಲ್ಲಿ ಏನು ಬಂಡವಾಳ ಇಲ್ಲ. ಆದರೂ ಈಗ ಕಾಂಗ್ರೆಸ್ ಸರ್ಕಾರ ಇದನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ. 10 ವರ್ಷದ ಹಿಂದೆ ನಡೆದಿರೋದು ಈಗ ಜೀವಂತ ಆಗಿದೆ, ಎಂದು ಜಂತಕಲ್ ಪ್ರಕರಣದ ಬಗ್ಗೆ ಎಚ್’ಡಿಕೆ ಹೇಳಿದ್ದಾರೆ.

ಎಸ್ಐಟಿ ಕಚೇರಿಯಿಂದ ಹೊರಬಂದ ಮಾತನಾಡಿದ ಎಚ್ಡಿಕೆ, ನಾಳೆ ಇದರ ಬಗ್ಗೆ ಸಂಪೂರ್ಣವಾಗಿ ಮಾತನಾಡಲಿದ್ದೇನೆ. ಸಿದ್ದರಾಮಯ್ಯ ಎಷ್ಟು ಡೋಂಗಿ ಎಂಬುವುದನ್ನು ನಾಳೆ ಬಯಲಿಗೆಳೆಯುತ್ತೆನೆ ಎಂದು ಗುಡುಗಿದ್ದಾರೆ.

ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಆದರೆ 15 ದಿನಕ್ಕೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಕುಮಾರಸ್ವಾಮಿ ಅವರಿಗೆ ಸೂಚಿಸಿದೆ.