ಬಾರ್'ನಲ್ಲಿ ಕುಳಿತು ಪೆಗ್ ಹಾಕಿದವನಂತೆ ಮಾತಾಡ್ತಾರೆ ಸಿಎಂ; ಹೆಚ್’ಡಿಕೆ

First Published 8, Apr 2018, 1:25 PM IST
HDK Slams CM Siddaramaiah
Highlights

ಅಪ್ಪನ ಮೇಲೆ ಆಣೆ ಹೇಳಿಕೆ ವಿವಾದಕ್ಕೆ  ಎಚ್ ಡಿಕೆ ಟಾಂಗ್ ನೀಡಿದ್ದಾರೆ.

ವಿಜಯಪುರ (ಏ. 08):  ಅಪ್ಪನ ಮೇಲೆ ಆಣೆ ಹೇಳಿಕೆ ವಿವಾದಕ್ಕೆ  ಎಚ್ ಡಿಕೆ ಟಾಂಗ್ ನೀಡಿದ್ದಾರೆ.

ಸಿಎಂ ಬಳಸುವ ಭಾಷೆ ನೋಡಿದರೇ  ಬಾರ್’ನಲ್ಲಿ ಪೆಗ್ ಹಾಕಿ ಕುಳಿತು‌ ಮಾತನಾಡಿದಂತಿದೆ. ಸಿದ್ದರಾಮಯ್ಯಾ ಮಾತನಾಡುವಾಗ ಸಿಎಂ ಥರ ಮಾತನಾಡಿಲ್ಲ. ಬಾರ್ ನಲ್ಲಿ ಪೆಗ್ ಹಾಕಿದವನಂತೆ ಮಾತನಾಡ್ತಿದ್ದಾರೆ.  ಇದನ್ನ ಮೊದಲು ನಿಲ್ಲಿಸಲಿ ಎಂದು  ಸಿಎಂರನ್ನ ಕುಮಾರಸ್ವಾಮಿ  ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. 

ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಕಾಂಗ್ರೆಸ್ ಪಕ್ಷ ಕುಸಿಯುತ್ತಾ  ಹೋಗುತ್ತೆ. ರಾಹುಲ್ ಪ್ರಚಾರದಿಂದ ಜನಾಕರ್ಷಣೆ ಆಗೋದಿಲ್ಲ. ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗೋದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ದಲ್ಲಿ ಜನರು ಸೇರಿಲ್ಲ. ಜನತೆಗೆ ರಾಷ್ಟ್ರೀಯ ಪಕ್ಷಗಳ ನಾಯಕರ ಮೇಲಿನ ವಿಶ್ವಾಸ ಕುಸಿದಿದೆ. ಜನರಿಗೆ ಆಕರ್ಷಣೆ ಕಡಿಮೆಯಾಗಿದೆ ಎಂದಿದ್ದಾರೆ. 

 

loader