ಸಿಎಂ ವಿರುದ್ಧ ಎಚ್ ಡಿಕೆ ಗರಂ; ಅಧಿಕಾರ ದುರುಪಯೋಗಪಡಿಸಿಕೊಂಡ್ರಾ ಸಿದ್ದರಾಮಯ್ಯ?

First Published 7, Apr 2018, 11:39 AM IST
HDK Slams CM Siddaramaiah
Highlights

ಸಿಎಂ ವಿರುದ್ಧ ಕುಮಾರಸ್ವಾಮಿ ಗರಂ ಆಗಿದ್ದಾರೆ.  ಎಚ್’ಡಿಕೆ  ಸಿಎಂ ಸಿದ್ದರಾಮಯ್ಯ ವಿರುದ್ಧ ಅಧಿಕಾರ ದುರುಪಯೋಗ ಆರೋಪ ಮಾಡಿದ್ದಾರೆ. 

ಬೆಂಗಳೂರು (ಏ. 07):  ಸಿಎಂ ವಿರುದ್ಧ ಕುಮಾರಸ್ವಾಮಿ ಗರಂ ಆಗಿದ್ದಾರೆ.  ಎಚ್’ಡಿಕೆ  ಸಿಎಂ ಸಿದ್ದರಾಮಯ್ಯ ವಿರುದ್ಧ ಅಧಿಕಾರ ದುರುಪಯೋಗ ಆರೋಪ ಮಾಡಿದ್ದಾರೆ. 

ಎಚ್ ಡಿಕೆ ಗುಪ್ತದಳದಿಂದ ವರದಿ ತರಿಸಿಕೊಂಡು ದಾಖಲೆ ಪ್ರತಿ ಬಿಡುಗಡೆ ಮಾಡಿದ್ದಾರೆ.  ಏಪ್ರಿಲ್ 5ರಂದು ಸಿಎಂ ಸಿದ್ದರಾಮಯ್ಯಗೆ  ಗುಪ್ತದಳ ಅಧಿಕಾರಿಗಳು ವರದಿ ಸಲ್ಲಿಸಿದ್ದರು.  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಗೆಲ್ಲಬಹುದಾ ಎಂದು ಸಿಎಂ ವರದಿ ಪಡೆದಿದ್ದರು. 

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಬಳಸಿಕೊಂಡು ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಎಚ್ ಡಿಕೆ ಹೇಳಿದ್ದಾರೆ. 

 

loader