ಸಿದ್ದರಾಮಯ್ಯನವರಿಗೆ ಅಧಿಕಾರದ ಮದ ತಲೆಗೇರಿದೆ; ಚುನಾವಣೆಯಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ: ಎಚ್’ಡಿಕೆ

First Published 6, Mar 2018, 12:28 PM IST
HDK Slams CM Siddaramaiah
Highlights

ಉತ್ತರ ಪ್ರದೇಶದ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ.  ಆದಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಪತ್ರಿಕೆಗಳು, ಮಾಧ್ಯಮಗಳು ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ ರಾಜ್ಯದ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಎಚ್’ಡಿಕೆ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಮಾ. 06):  ಉತ್ತರ ಪ್ರದೇಶದ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ.  ಆದಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಪತ್ರಿಕೆಗಳು, ಮಾಧ್ಯಮಗಳು ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ ರಾಜ್ಯದ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಎಚ್’ಡಿಕೆ ವಾಗ್ದಾಳಿ ನಡೆಸಿದ್ದಾರೆ. 

ಈದ್ಗಾ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಯಾಕೆ ಚಕಾರ ಎತ್ತುತ್ತಿಲ್ಲ?  ಯೋಗಿ, ಭೋಗಿಗಳ ಭಾಷಣದಿಂದ ಇಲ್ಲಿನ ಸಮಸ್ಯೆ ಬಗೆಹರಿಯದು.  ಬಿಬಿಎಂಪಿ ಅಧಿಕಾರಕ್ಕೆ ಜೆಡಿಎಸ್ ಮನೆ ಬಾಗಿಲಿಗೆ ಬಂದವರು ಯಾರು? ನಂಜನಗೂಡು ಉಪಚುನಾವಣೆಗೆ ಬೆಂಬಲ ಕೋರಿದ್ದು ಯಾರು? ಸಿದ್ದರಾಮಯ್ಯಗೆ ಅಧಿಕಾರದ, ಹಣದ ಮದ ಇದೆ.  ಬನ್ನಿ ಚುನಾವಣೆಗೆ ಅಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ. ನಮ್ಮ ಬಗ್ಗೆ ಲಘುವಾಗಿ ಮಾತನಾಡಬೇಡಿ. ಮೈಸೂರಿಗೆ ಬಂದಾಗ ನಿಮ್ಮ ಬಗ್ಗೆ ವಿವರವಾಗಿ ಮಾತನಾಡುತ್ತೇನೆ ಎಂದು ಎಚ್ಡಿಕೆ ಕಿಡಿ ಕಾರಿದ್ದಾರೆ. 
ನಾವು ಅಧಿಕಾರಕ್ಕೆ ಬರುತ್ತೇವೆ. ನೀವು ಮಾನಸಿಕವಾಗಿ ಸಿದ್ದರಾಗಿ. ಶಾಸಕ ನೈಸ್ ಉದ್ಯಮಿ ಅಶೋಕ ಖೈಣಿ ಕಾಂಗ್ರೆಸ್ ಸೇರಿರುವ ಬಗ್ಗೆ ಕಾಂಗ್ರೇಸ್’ನಲ್ಲಿ ವಿರೋಧವಿದೆ. ಈ ಸರ್ಕಾರದ ನಿಲುವು ಗೊತ್ತಾಗಲಿದೆ. ಅಶೋಕ ಖೈಣಿಗೆ ರಕ್ಷಣೆ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ಎಚ್’ಡಿಕೆ ಹೇಳಿದ್ದಾರೆ.  

loader