ಸಿದ್ದರಾಮಯ್ಯ ಯಾರ ಜೊತೆ ವ್ಯವಹಾರ ಮಾಡಿಕೊಂಡಿದ್ದರು, ಯಾರ ಜೊತೆ ವ್ಯವಹಾರ ಮಾಡಿದ್ದರು  ಎಂಬುದನ್ನು ಕಾಂಗ್ರೆಸ್ ಮುಖಂಡರೇ ಬಹಿರಂಗ ಪಡಿಸಲಿದ್ದಾರೆ'

ಬೆಂಗಳೂರು(ಡಿ.02): ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜೊತೆ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡಿದ್ದರು. ಆಪರೇಷನ್ ಕಮಲದ ವೇಳೆ ಕೈಜೋಡಿಸಿದ್ದ ಮುಖ್ಯಮಂತ್ರಿಗಳು ಬಿಜೆಪಿ ಜತೆ ಸೇರಿ ತನ್ನ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಿದ್ದರು. ಸಿದ್ದರಾಮಯ್ಯ ಯಾರ ಜೊತೆ ವ್ಯವಹಾರ ಮಾಡಿಕೊಂಡಿದ್ದರು, ಯಾರ ಜೊತೆ ವ್ಯವಹಾರ ಮಾಡಿದ್ದರು ಎಂಬುದನ್ನು ಕಾಂಗ್ರೆಸ್ ಮುಖಂಡರೇ ಬಹಿರಂಗ ಪಡಿಸಲಿದ್ದಾರೆ' ಎಂದು ತಿಳಿಸಿದ್ದಾರೆ.