ಮೋದಿ+ಕುಮಾರ: ಕಾಂಗ್ರೆಸ್ ಆತಂಕ

First Published 26, Jun 2018, 9:14 AM IST
HDK Meet Narendra Modi, Scared Congress
Highlights
  •  ಹೆಚ್.ಡಿ.ಕುಮಾರಸ್ವಾಮಿಗೆ ಮೊದಲು ಭೇಟಿಗೆ ಅವಕಾಶ ನೀಡಿದ್ದ ನರೇಂದ್ರ ಮೋದಿ
  • ಮೋದಿಯವರನ್ನು HDK ಭೇಟಿ ಮಾಡಿದಾಗಲೆಲ್ಲ ಕಾಂಗ್ರೆಸ್ ನಾಯಕರಿಗೆ ಆತಂಕ 

ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಪ್ರಧಾನಿ ಮೋದಿ ಅವರನ್ನು ಎರಡು ಬಾರಿ ಭೇಟಿಯಾಗಿದ್ದು, ಎರಡೂ ಸಲ ಮೀಟಿಂಗ್ 30 ನಿಮಿಷದವರೆಗೆ ನಡೆದಿದೆ. ಕಳೆದ ವಾರ ನೀತಿ ಆಯೋಗದ ಸಭೆಗೆಂದು ಕುಮಾರಸ್ವಾಮಿ ದೆಹಲಿಗೆ ಬಂದಿದ್ದಾಗ ಕೇರಳದ ಸಿಎಂ ಪಿಣರಾಯಿ ವಿಜಯನ್ ಹಾಗೂ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಸಮಯ ಕೇಳಿದ್ದರು. ಇಬ್ಬರಿಗೂ ಸಮಯ ನಿರಾಕರಿಸಿದ ಮೋದಿ, ಕುಮಾರಸ್ವಾಮಿ ಅವರನ್ನು ಮಾತ್ರ ಕರೆಸಿಕೊಂಡು ಅರ್ಧ ಗಂಟೆ ಮಾತನಾಡಿದ್ದು ಕಾಂಗ್ರೆಸ್ ನಾಯಕರ ಹುಬ್ಬೇರಿಸಿದೆ.

ಎಲ್ಲಿ ನಿತೀಶ್ ಕುಮಾರ್ ತರಹ ಕುಮಾರಸ್ವಾಮಿಯನ್ನು ಅರ್ಧಕ್ಕೇ ಕರೆದುಕೊಂಡು ಹೋಗುತ್ತಾರೋ ಎಂಬ ಆತಂಕದಲ್ಲಿರುವ ರಾಹುಲ್ ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಕಾಲು ಕೆರೆದು ಜಗಳವಾಡಬೇಡಿ ಎಂದು ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ.ಅಂದ ಹಾಗೆ ಮೋದಿ ಸಾಹೇಬರನ್ನು ಭೇಟಿ ಆಗಿ ಬಂದಾಗಲೆಲ್ಲ ಮಾರಸ್ವಾಮಿ ಮುಖ ಲಕಲಕ ಹೊಳೆಯುತ್ತಿರುತ್ತದೆ ಎಂಬುದು ಕಾಕತಾಳೀಯವೂ ಇರಬಹುದು ಬಿಡಿ. 

(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)

loader