ಕರ್ನಾಟಕದಲ್ಲಿ ಐಟಿ ಕ್ಷೇತ್ರ ಬೆಳೆಯೋದಕ್ಕೆ ಕಾರಣ ಯಾರಂದ್ರೆ ಪ್ರತಿಯೊಬ್ಬರು ಎಸ್.ಎಂ.ಕೃಷ್ಣ ಅವರ ಹೆಸರನ್ನೇ ಹೇಳುತ್ತಾರೆ. ಆದರೆ, ದೇವೇಗೌಡರಿಗೆ ನಗರ ಪ್ರದೇಶ ಗೊತ್ತಿಲ್ಲ ಎಂದು ಪ್ರಚಾರ ಮಾಡಡುತ್ತಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ.15): ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಜನತಾದಳವು ಗ್ರಾಮೀಣ ಪ್ರದೇಶ ಹಾಗೂ ರೈತರಿಗೆ ಮಾತ್ರ ಸೀಮಿತವೆಂದು ಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾದಾನ ವ್ಯಕ್ತಪಡಿಸಿರುವ ಎಚ್’ಡಿಕೆ, ಮೊದಲಬಾರಿಗೆ ಮಾಹಿತಿ ತಂತ್ರಜ್ಞಾನಕ್ಕೆ ತೆರಿಗೆ ವಿನಾಯಿತಿ ನೀಡಿದ್ದು ದೇವೇಗೌಡರು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಐಟಿ ಕ್ಷೇತ್ರ ಬೆಳೆಯೋದಕ್ಕೆ ಕಾರಣ ಯಾರಂದ್ರೆ ಪ್ರತಿಯೊಬ್ಬರು ಎಸ್.ಎಂ.ಕೃಷ್ಣ ಅವರ ಹೆಸರನ್ನೇ ಹೇಳುತ್ತಾರೆ. ಆದರೆ, ದೇವೇಗೌಡರಿಗೆ ನಗರ ಪ್ರದೇಶ ಗೊತ್ತಿಲ್ಲ ಎಂದು ಪ್ರಚಾರ ಮಾಡಡುತ್ತಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದ ಮೂಲಕ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಸಮಸ್ಯೆಗಳು ಕುರಿತು ಚರ್ಚೆ ನಡೆಸಿದ್ದಾರೆ. ಕಾರವಾರ - ಕರಾವಳಿ ಸೇರಿದಂತೆ ಸಮಗ್ರ ದೃಷ್ಟಿಕೋನ ಇಟ್ಟುಕೊಂಡು ಪ್ರವಾಸಿತಾಣಗಳ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಬೇಕು ಎಂದು ಹೇಳಿದ್ದಾರೆ.