.

ಚನ್ನಪಟ್ಟಣ(ಡಿ.12): ಅನಿತಾ ಕುಮಾರಸ್ವಾಮಿ ಅವರ ಚುನಾವಣಾ ಸ್ಪರ್ಧೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವ ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡ ಅವರು, ಪರೋಕ್ಷವಾಗಿ ಈ ಹೊಣೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೆಗಲಿಗೇ ಹಾಕಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದ ನೀಲಸಂದ್ರ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನಿತಾಕುಮಾರಸ್ವಾಮಿಗೆ ಇಲ್ಲಿಂದ ಸ್ಪರ್ಧಿಸುವ ಆಸೆ ಇದೆ. ಆದರೆ ಪಟ್ಟಿ ಅಂತಿಮ ಮಾಡುವುದು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಗಿರುವುದರಿಂದ ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು. ಮೊದಲು ಅನಿತಾರನ್ನು ಕರೆದುಕೊಂಡು ಹಳ್ಳಿ ಹಳ್ಳಿ ಸುತ್ತಿ ಎಂದರು.