ಚುನಾವಣೆ ನಂತರ ಸಿದ್ದರಾಮಯ್ಯ ಬಿಜೆಪಿ ಸೇರಿದ್ರೆ ಆಶ್ಚರ್ಯವಿಲ್ಲ: ಎಚ್'ಡಿಕೆ

First Published 2, Feb 2018, 12:15 PM IST
HDK Critises CM Siddharamaiah
Highlights

ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅಪಹಾಸ್ಯ ಮಾಡಿದ್ದಾರೆ.  

ವಿಜಯಪುರ (ಫೆ.02): ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅಪಹಾಸ್ಯ ಮಾಡಿದ್ದಾರೆ.  

ಸಿದ್ರಾಮಯ್ಯನವರೇ, 2018 ರ ಚುನಾವಣೆಯಲ್ಲಿ 40, 50 ಸೀಟ್ ಪಡೆದು ಬಿಜೆಪಿ ಸೇರಿದ್ರೆ ಆಶ್ಚರ್ಯಪಡಬೇಕಿಲ್ಲ. ನನಗೆ ಸಂಶಯವಿದೆ. ಇದನ್ನು ನಾನು ತಮಾಷೆಗೆ ಹೇಳುತ್ತಿಲ್ಲ ಎಂದು ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಎಚ್'ಡಿಕೆ ಹೇಳಿದ್ದಾರೆ.

ಸಿದ್ದರಾಮಯ್ಯ  ಒಳಗಡೆ ಏನ್ ಮಾಡೋಕು ಸಿದ್ಧವಾಗಿದ್ದಾರೆ. ಅವರಿಗೆ ಅಧಿಕಾರ ಬೇಕಾಗಿದೆ ಅಷ್ಟೆ. ಕಾಂಗ್ರೆಸ್'ನಲ್ಲಿ ಸಿದ್ರಾಮಯ್ಯ ಹೇಳಿದವರಿಗೆ ಟಿಕೇಟ್ ಕೊಡ್ತಾರೆ. ಸಿಎಂ ಅನ್ನು ಬಿಟ್ಟು ಹೈ ಕಮಾಂಡ್'ಗೆ ಟಿಕೇಟ್ ಕೊಡೋಕ್ ಆಗಲ್ಲ. 0 ಈ ವೇಳೆ ಅವರ ಅಭಿಮಾನಿಗಳಿಗೆ ಜಾಸ್ತಿ ಟಿಕೇಟ್ ಕೊಡಿಸ್ಕೊತಾರೆ. ಅತಂತ್ರ ಪರಿಸ್ಥಿತಿ ಬಂದ್ರೆ ಅವರೇ ಮೊದಲು ನರೇಂದ್ರ ಮೋದಿ ಹತ್ರ ಹೋಗಿ ನಿಂತ್ಕೊತಾರೆ. ಇದು ನನ್ನ ಅಭಿಪ್ರಾಯ.  ಅವರ ನಡುವಳಿಕೆ ನೋಡಿದರೆ ನನಗೆ ಹಾಗೆ ಅನಿಸುತ್ತದೆ. 40, 50 ಸೀಟ್ ಡಿವೈಡ್ ಮಾಡ್ಕೊಂಡು ಅವರೇ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವ ವಾತಾವರಣ ನಿರ್ಮಾಣ ಮಾಡಿದ್ರೂ ಆಶ್ಚರ್ಯ ಪಡಬೇಡಿ. ಕಾಂಗ್ರೆಸ್ ಗೆ ಓಟ್ ಹಾಕುವ ಮೊದಲು ಇದನ್ನು ನಮ್ಮ ಅಲ್ಪಸಂಖ್ಯಾತರು ಸೂಕ್ಷ್ಮವಾಗಿ, ಗಮನಿಸಬೇಕಿರುವುದು ಸೂಕ್ತ ಎಂದು ಎಚ್'ಡಿಕೆ ಹೇಳಿದ್ದಾರೆ.

loader