ಜೆಡಿಎಸ್ ಕಾರ್ಯಕರ್ತನ ಆಸೆ ಈಡೇರಿಸಿದ ಎಚ್'ಡಿಕೆ

First Published 24, Jan 2018, 1:53 PM IST
HDK Attended JDS Activist Twins Birthday Ceremony
Highlights

ಮಾಜಿ ಸಿಎಂ ಹೆಚ್'ಡಿ ಕುಮಾರ ಸ್ವಾಮಿ  ಪ್ರಾಮಾಣಿಕ ಕಾರ್ಯಕರ್ತನ ಆಸೆ ಈಡೇರಿಸಿದ್ದಾರೆ.  

ಬೆಂಗಳೂರು (ಜ.24): ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ  ಪ್ರಾಮಾಣಿಕ ಕಾರ್ಯಕರ್ತನ ಆಸೆ ಈಡೇರಿಸಿದ್ದಾರೆ.  

ಹಲವಾರು ವರ್ಷಗಳಿಂದಲೂ ಪ್ರೇಮ್ ಎಂಬುವವರು ಜೆಡಿಎಸ್'ನ ಪ್ರಾಮಾಣಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದರು. ತಮ್ಮ ಅವಳಿ ಜವಳಿ ಹೆಣ್ಣುಮಕ್ಕಳ ನಾಮಕರಣವನ್ನ ತಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲೇ ನಡೆಯಬೇಕೆಂದು ಕೇಳಿಕೊಂಡಿದ್ದ ಪ್ರೇಮ್ ಕೇಳಿಕೊಂಡಿದ್ದರು.

ಪ್ರೇಮ್'ರವರ ಸ್ವಂತ ಗ್ರಾಮ ಮಾಗಡಿ ತಾಲೂಕಿನ ಚಿಕ್ಕಮುದಿಗೆರೆಗೆ ಬಂದ ಹೆಚ್.ಡಿ.ಕೆ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಳಿ ಜವಳಿ ಹೆಣ್ಣುಮಕ್ಕಳಿಗೆ ಶುಭಹಾರೈಸಿದ್ದಾರೆ.

ಈ ಹಿಂದೆ ಅಭಿಮಾನಿಯೊಬ್ಬನ ಮದುವೆಯಲ್ಲೂ ಕೂಡಾ ಭಾಗವಹಿಸಿ ವಧುವರರಿಗೆ ಶುಭ ಹಾರೈಸಿದ್ದರು. ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ರವಿ ಎನ್ನುವವರು ಕುಮಾರಸ್ವಾಮಿ ವಿವಾಹಕ್ಕೆ ಬರಲೇಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದ. ಅವರ ಮದುವೆಯಲ್ಲಿ ಭಾಗವಹಿಸಿದ್ದರು.  

loader