ನಾನು ಡ್ಯಾಂ ಕಟ್ಟಿಸಿದವನು, ನಾನು ಬದುಕಿದ್ದಾಗಲೇ ಇಂಥ ಸ್ಥಿತಿ ನೋಡಬೇಕಾ? ದೇವೇಗೌಡ ಕಣ್ಣೀರು
ಹಾಸನ (ಫೆ.25): ನನ್ನ ಜಿಲ್ಲೆಯ ರೈತರು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದ್ದಾರೆ, ನ್ಯಾಯಕ್ಕಾಗಿ ನಾನು ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ, ಎಚ್.ಡಿ ದೇವೇಗೌಡ ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು, ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದಾರೆ, ಯಗಚಿಯಿಂದ ಹಾಸನ ನಗರಕ್ಕೆ ನೀರನ್ನು ಸಹ ಕೊಡುತ್ತಿಲ್ಲ., ಕೂಡಲೇ ನೀರಿನ ಹರಿವು ಸ್ಥಗಿತ ಮಾಡಬೇಕು, ಇಲ್ಲವಾದ್ರೆ ಸಿಎಂ ಮನೆ ಮುಂದೆ ಧರಣಿ ನಡೆಸುವುದಾಗಿ ಜೆಡಿಎಸ್ ವರಿಷ್ಠರು ಎಚ್ಚರಿಸಿದ್ದಾರೆ.
ನಾನು ಡ್ಯಾಂ ಕಟ್ಟಿಸಿದವನು, ನಾನು ಬದುಕಿದ್ದಾಗಲೇ ಇಂಥ ಸ್ಥಿತಿ ನೋಡಬೇಕಾ ಅಂತ ದೇವೇಗೌಡರು ಕಣ್ಣೀರು ಹಾಕಿದರು.
