ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ 7 ಶಾಸಕರು ಕಾಂಗ್ರೆಸ್ ಸೇರಿದ್ದಾರೆ

First Published 12, Apr 2018, 6:14 PM IST
HDD Slams Siddaramaiah Government
Highlights

ರಾಹುಲ್ ಗಾಂಧಿ ಒಂದು ಕಡೆ ಕ್ಲೀನ್ ನಾವು ಅನುತ್ತಾರೆ. 7 ಜನರನ್ನ  ಮಡಿವಂತಿಕೆ ಹಾಗೂ ಶುದ್ಧಿ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ.

ಬೆಂಗಳೂರು(ಏ.12):  ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ 7 ಶಾಸಕರು ಮಡಿವಂತಿಕೆ ಹಾಗೂ ಶುದ್ದಿ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಒಂದು ಕಡೆ ಕ್ಲೀನ್ ನಾವು ಅನುತ್ತಾರೆ. ಈ 7 ಜನರನ್ನ  ಮಡಿವಂತಿಕೆ ಹಾಗೂ ಶುದ್ಧಿ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ನೀವು ಮಾತನಾಡುವುದನ್ನ ಮರ್ಯಾದೆಯಿಂದ  ನಿಲ್ಲಿಸಿ ಒಳ್ಳೆಯ ಯೋಗ್ಯವಾದ ಮಾತನಾಡಿ. ಪ್ರತಿ ನಿತ್ಯ ಲೂಟಿ ಮಾಡಿ ಎಲ್ಲೆಲ್ಲಿ ಅಕ್ರಮ ಮಾಡುತ್ತಿದ್ದಿರಿ ಅನ್ನೊದು ಗೊತ್ತಿದೆ ನನಗೆ ಎಷ್ಟು ಕಿರುಕುಳ ಕೊಟ್ಟಿರುವುದು ಗೊತ್ತು ಎಂದು ಗುಡಿಗಿದರು.

loader