. ಪ್ರತಿ ದಿನ ಒಂದೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ಉತ್ತರಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ'
ವಿಜಯಪುರ(ಆ.20): ಅಮಿತ್ ಶಾ, ರಾಹಿಲ್ ಗಾಂಧಿ ರಾಜ್ಯಕ್ಕೆ ಬಂದೂ ಹೋದರೂ ಏನು ಆಗಲ್ಲ. ನಾವು ಯಾರಿಗೂ ಹೆದರಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಯಾರು ಬಂದರೂ ಯಾವುದೇ ಉಪಯೋಗವಿಲ್ಲ. ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಜೆಡಿಎಸ್ ಯಾರಿಗೂ ಹೆದರಲ್ಲ. ಮುಂದೆಯೂ ಹೆದರೋದಿಲ್ಲ. ಪ್ರತಿ ದಿನ ಒಂದೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ಉತ್ತರಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ' ಎಂದು ಹೇಳಿದರು.
ಮುಂದಿನ ಮಾರ್ಚ್, ಏಪ್ರಿಲ್ನಲ್ಲಿ ಚುನಾವಣೆ ನಡೆಯಬಹುದು. ಸೆಪ್ಟೆಂಬರ್ ಅಂತ್ಯದೊಳಗಾಗಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುತ್ತೇವೆ. ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯದಂತೆ ಟಿಕೆಟ್ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.

